ಕನ್ನಡ ವಾರ್ತೆಗಳು

ಭಯೋತ್ಪಾದನೆ ವಿರುದ್ದ ಜನಾಂದೊಲನಕ್ಕಾಗಿ ಉಳ್ಳಾಲ ವಿದ್ಯಾರ್ಥಿಗಳಿಂದ ಸೈಕಲ್ ರ್‍ಯಾಲಿ

Pinterest LinkedIn Tumblr

ullala_cycal_Rally_1

ಉಳ್ಳಾಲ. ಫೆ, 14: ಎಸ್ಸೆಸ್ಸೆಫ್ ರಾಜ್ಯ ಸಮಿತಿ ಘೋಷಿಸಿರುವ ಭಯೋತ್ಪಾದನೆ ವಿರುದ್ದ ಜನಾಂದೊಲನ ಜನವರಿ 30ರಿಂದ ಮಾರ್ಚ್ 20 ವರೆಗೆ ನಡೆಯಲಿದ್ದು, ಇದರ ಪ್ರಯುಕ್ತ ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಂದ ಸೈಕಲ್ ರ್‍ಯಾಲಿ ಶನಿವಾರ ಉಳ್ಳಾಲ ಅಳೇಕಲದಲ್ಲಿ ನಡೆಯಿತು.

ಅಬೂಝಿಯಾದ್ ಮದನಿ ಪಟ್ಟಾಂಬಿರವರು ಅಳೇಕಲ ಹಝ್ರತ್ ಅಚ್ಚೆಸಾಹಿಬ್ ವಲಿಯುಲ್ಲಾಹಿ ದರ್ಗಾ ಝೀಯಾತ್ ನೆರವೇರಿಸಿ ಸೈಕಲ್ ರ್‍ಯಾಲಿಗೆ ಚಾಲನೆ ನೀಡಿದರು.

ullala_cycal_Rally_2 ullala_cycal_Rally_3 ullala_cycal_Rally_4 ullala_cycal_Rally_5

ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಎಸ್ಸೆಸ್ಸೆಫ್ ಅಳೆಕಲ ಶಾಖೆಯ ಪ್ರ.ಕಾರ್ಯದರ್ಶಿ ಅರೀಫ್, ಸ್ಥಳಿಯರಾದ ಫಾರೂಕ್ ಯು.ಡಿ, ಇಬ್ರಾಹಿಂ ಯು.ಡಿ, ಅಶ್ರಫ್, ಲತೀಫ್, ರಿಯಾನ್, ಹನೀಫ್ ಮುಸ್ಲಿಯಾರ್, ಶಫೀಕ್, ನಾಫಿ, ಆಶಿಕ್, ಶಾಕಿರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Write A Comment