ಮಂಗಳೂರು,ಫೆ.14: ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಕಾಜ್ಜಂಗಾಡು ಮೊಕ್ಕಾಂನಿಂದ ನಗರದ ರಥಭೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಲ್ಲಿ ನಡೆಯುತ್ತಿರುವ “ಮಂಗಳೂರು ರಥೊಥ್ಸವಕ್ಕೆ” ಶನಿವಾರ ಅಗಮಿಸಿದರು.
” ಶ್ರೀಗಳಿಂದ “ಪುರ ಪ್ರವೇಶ “ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ಜರಗಿತು.ಪ್ರಾರಂಭದಲ್ಲಿ ರಥ ಬೀದಿಯ ಸ್ವದೇಶೀ ಸ್ಟೋರ್ ಬಳಿಯಿಂದ ಶ್ರೀಗಳವರಿಗೆ ವಿಶೇಷ ಅಡ್ಡ ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ, ವಿವಿಧ ವಾದ್ಯ ಘೋಷ , ಬಿರುದು ಬಾವಳಿಗಳೊಂದಿಗೆ ಸ್ವಾಗತಿಸಲಾಯಿತು.
ಶ್ರೀ ಸಂಸ್ಥಾನದ ದೇವರ ಹಾಗೂ ಪರಮಪೂಜ್ಯ ಶ್ರೀಮದ್ ಸುಧಿಂದ್ರ ತೀರ್ಥರ ಭಾವಚಿತ್ರಗಳನ್ನಿ ಪ್ರತ್ಯೆಕ ಪಲ್ಲಕ್ಕಿಗಳಲ್ಲರಿಸಿದ್ದು ರಥಬೀದಿಯುದ್ದಕ್ಕೂ ಪುರಪ್ರವೇಶ ಸಹಸ್ರಾರು ಭಗವದ್ಭಕ್ತರ ಸಮ್ಮುಖದಲ್ಲಿ ನೆರೆವೇರಿತು.
ಶ್ರೀ ಗಳವರ ಪುರಪ್ರವೇಶದ ಬಳಿಕ ಶ್ರೀ ದೇವರ ಭೇಟಿ ತದನಂತರ ಶ್ರೀ ದೇವರ ಮೃಗ ಭೇಟಿ ಉತ್ಸವ ನಡೇಯುತು. ನಳೀಕ ಶ್ರೀ ಗಳವರು ಡೊಂಗರಕೇರಿ ಕಟ್ಟೆಯಲ್ಲಿ ಮೃಗ ಭೇಟಿ ನಡೆಸಿ ಉತ್ಸವದಲ್ಲಿ ಪಾಲ್ಗೊಲುವರು.
ಚಿತ್ರ : ಮಂಜು ನೀರೆಶ್ವಲ್ಯ್ಯ