ಮುಂಬಯಿ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 75ನೇ ವಾರ್ಷಿಕೋತ್ಸವ ಸಮಾರಂಭ ಫೆ. 14ರಂದು ಅಂಧೇರಿ (ಪ.) ಎಂವಿಎಂ ಮಂಡಳದ ಶ್ರೀಮತಿ ಶಾಲಿನಿ ಜಿ. ಶಂಕರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜರಗಿತು.
ನಾಡೋಜ ಡಾ| ಜಿ. ಶಂಕರ್ ಸಮಾರಂಭವನ್ನು ಉದ್ಘಾಟಿಸಿದರು. ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ಉಪ ಕಾರ್ಯಾಧ್ಯಕ್ಷ ಸುರೇಶ್ ಆರ್. ಕಾಂಚನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಈಕ್ವಿಟಿ ಗ್ರೂಪ್ ಆಫ್ ಹೊಟೇಲ್ಸ್‌ನ ಆಡಳಿತ ನಿರ್ದೇಶಕ ಗೋಪಾಲ್ ಎಸ್. ಪುತ್ರನ್ ಪಾಲ್ಗೊಂಡಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಅಜಿತ್ ಜಿ. ಸುವರ್ಣ, ದಿವ್ಯ ಶಿಪ್ಪಿಂಗ್ ಆ್ಯಂಡ್ ಕ್ಲೀನಿಂಗ್ ಸರ್ವಿಸಸ್ ಪ್ರೈ. ಲಿಮಿಟೆಡ್ ಇದರ ಜತೆ ಆಡಳಿತ ನಿರ್ದೇಶಕ ವೇದಪ್ರಕಾಶ್ ಎಸ್. ಶ್ರೀಯಾನ್, ಸುಖಸಾಗರ್ ಗ್ರೂಪ್ ಆಫ್ ಹೊಟೇಲ್‌ನ ಆಡಳಿತ ನಿರ್ದೇಶಕ ಸುರೇಶ್ ಎಸ್. ಪೂಜಾರಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮೊಗವೀರ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ಪಂಚವಟಿ ವಾಲ್ವೇಸ್ ಇದರ ಆಡಳಿತ ನಿರ್ದೇಶಕ ಶ್ರೀನಿವಾಸ ಕಾಂಚನ್, ಉದ್ಯಮಿ ರಾಮು ಎನ್. ಚಂದನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರ, ಮಾಜಿ ಅಧ್ಯಕ್ಷ ಕೇಶವ ಕುಂದರ್, ಮೊಗವೀರ ಯುವ ಸಂಘಟನೆ ಉಡುಪಿ ಅಧ್ಯಕ್ಷ ಗಣೇಶ್ ಕಾಂಚನ್, ರಾಯಲ್ ಗ್ರೂಪ್ ಆಫ್ ಕಂಪೆನೀಸ್ ಇದರ ಆಡಳಿತ ನಿರ್ದೇಶಕ ವಿನೋದಾ ಎಸ್. ಕೋಟ್ಯಾನ್, ಭಾಟಿಯಾ ಶಿಪ್ಪಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಶೈಲೇಶ್ ಎಲ್. ಭಾಟಿಯಾ, ಕನಕ ಗ್ರೂಪ್ ಆಫ್ ಹೊಟೇಲ್ಸ್ ಆ್ಯಂಡ್ ಹಾಸ್ಪಿಟಾಲಿಟೀಸ್ ಇದರ ಆಡಳಿತ ನಿರ್ದೇಶಕ ಜಗದೀಶ್ ಶೆಟ್ಟಿ ಆಗಮಿಸಿದ್ದರು.
ವಿಶೇಷ ಅತಿಥಿಗಳಾಗಿ ನ್ಯಾಯವಾದಿ ಚಂದ್ರ ಕೆ. ನಾೖಕ್, ಬಿಎಎಸ್‌ಎಫ್ ಲಿಮಿಟೆಡ್ ಇದರ ಲೀಗಲ್ ಡೈರೆಕ್ಟರ್ ಪ್ರದೀಪ್ ಚಂದನ್, ಟಾಟಾ ಕೆಮಿಕಲ್ಸ್ ಲಿಮಿಟೆಡ್ ಇದರ ಲೀಗಲ್ ವೈಸ್ ಪ್ರಸಿಡೆಂಟ್ ರಾಜೀವ್ ಚಂದನ್, ಎಂಎಂಎಸ್‌ಎಸ್ ಮೀರಾರೋಡ್ ಶಾಖೆಯ ಗೌರವಾಧ್ಯಕ್ಷ ಸಂತೋಷ್ ಕೆ. ಪುತ್ರನ್, ಎಂಎಂಎಸ್‌ಎಸ್ ಥಾಣೆ ಶಾಖೆಯ ಕಿಶೋರ್ ಬಂಗೇರ, ಎಂಎಂಎಸ್‌ಎಸ್ ಡೊಂಬಿವಲಿ ಶಾಖೆಯ ನಾರಾಯಣ್ ಚಂದನ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷ, ಗೋಪಾಲ್ ಪುತ್ರನ್ ಎಸ್. ಪುತ್ರನ್ ಅವರನ್ನು ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಾಂಚನಿ ಕಲಾಕೇಂದ್ರ ಮತ್ತು ಸಂಸ್ಥೆಯ ಸದಸ್ಯರಿಂದ, ಸದಸ್ಯೆಯರಿಂದ, ಮಕ್ಕಳಿಂದ ನೃತ್ಯ ವೈವಿಧ್ಯ ಜರಗಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಉಪಸಮಿತಿಗಳ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್