ಅಂತರಾಷ್ಟ್ರೀಯ

ಮಾ.9ಕ್ಕೆ ಸೂರ್ಯಗ್ರಹಣ

Pinterest LinkedIn Tumblr

sun

ವಾಷಿಂಗ್ಟನ್: ಮಾರ್ಚ್ 9 ರಂದು ಆಗ್ನೇಯ ಏಷ್ಯಾ ಭಾಗದ ಜನರು ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ. ಆಗ್ನೇಯ ಏಷ್ಯಾ ಭಾಗಗಳಲ್ಲಿ ಸುಮಾರು 1 ನಿಮಿಷಗಳ ಕಾಲ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದೆ ಎಂದು ನಾಸಾ ತಿಳಿಸಿದೆ.

ಹವಾಯಿ, ಗುವಾಂ ಮತ್ತು ಅಲಾಸ್ಕಾ ಸೇರಿದಂತೆ ಏಷ್ಯಾ ಮತ್ತು ಪೆಸಿಫಿಕ್​ನ ಹಲವು ರಾಷ್ಟ್ರಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಲಿದೆ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಪಥದಲ್ಲಿ ಪರಿಭ್ರಮಿಸುವುದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ

Write A Comment