Uncategorized

ಮೂಡುಬಿದಿರೆ : ದ್ವಿಚಕ್ರದಲ್ಲಿ ಸಾಗುತ್ತಿದ್ದ ಯುವಕನಿಗೆ ಮೆಣಸಿನ ಹುಡಿ ಎರಚಿ ಯುವತಿಯಿಂದ ಹಲ್ಲೆ

Pinterest LinkedIn Tumblr

ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಬಡಗ ಮಿಜಾರಿನ ಕೊಪ್ಪದ ಕುಮೇರು ಎಂಬಲ್ಲಿ ದ್ವಿಚಕ್ರದಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುತಿದ್ದ ಯುವಕನೋರ್ವನನ್ನು ಯುವತಿಯೊಬ್ಬಳು ಅಡ್ಡಕಟ್ಟಿ ಮೆಣಸಿನ ಹುಡಿ ಎರಚಿ, ಹಲ್ಲೆ ನಡೆಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಕೊಪ್ಪದ ಕುಮೇರ್ ನಿವಾಸಿ ರವಿ ದೇವಾಡಿಗ ಎಂಬವರ ಪುತ್ರಿ ಅಕ್ಷತಾ ಎಂಬಾಕೆಯೇ ಹಲ್ಲೆ ನಡೆಸಿದ ಯುವತಿ. ಸೋಮವಾರ ರಾತ್ರಿ ರವಿ ದೇವಾಡಿಗ ಎಂಬವರಿಂದ ಹಲ್ಲೆಗೊಳಗಾಗಿದ್ದ ದಿನೇಶ್ ಪೂಜಾರಿ ಎಂಬವರೇ ಇದೀಗ ರವಿ ಪೂಜಾರಿಯ ಪುತ್ರಿಯಿಂದ ಹಲ್ಲೆಗೊಳಗಿರುವ ಯುವಕ.

ಭಾನುವಾರ ರವಿ ದೇವಾಡಿಗ ಹಾಗೂ ಅವರ ಪುತ್ರಿಯರು ದಿನೇಶ್ ಅವರ ಮೇಲೆ ಹಲ್ಲೆ ನಡೆಸಿದ್ದು, ದಿನೇಶ್ ಹಾಗೂ ಸ್ಥಳೀಯರು ಮಂಗಳವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಲ್ಲೆ ಪ್ರಕರಣದಲ್ಲಿ ಗಾಯಗೊಳಗಾಗಿದ್ದ ದಿನೇಶ್ ಅವರು ಬುಧವಾರದಂದು ಮೂಡುಬಿದಿರೆ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ, ರವಿ ದೇವಾಡಿಗನ ಪುತ್ರಿಯರು ದ್ವಿಚಕ್ರ ವಾಹನ ಅಡಗಟ್ಟಿ ಮತ್ತೆ ಹಲ್ಲೆ ನಡೆಸಿದ್ದಲ್ಲದೆ, ಬಳಿಕ ಮೆಣಸಿನ ಹುಡಿ ಎರಚಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಧ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಾಗ, ರವಿ ದೇವಾಡಿಗ ಹಾಗೂ ಆತನ ಪುತ್ರಿಯರು ಅಮಾಯಕರ ಮೇಲೆ ಹಲ್ಲೆ ನಡೆಸುವುದು, ಯುವಕರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು, ಅವರನ್ನು ಬಡಗಮಿಜಾರು ಗ್ರಾಮದಿಂದ ಗಡಿಪಾರು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರವಿ ದೇವಾಡಿಗ ಕುಟುಂಬವು ಈ ಹಿಂದೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೋಟೆಬಾಗಿಲು-ಸುಭಾಸ್‌ನಗರದಲ್ಲಿ ವಾಸಿಸುತ್ತಿತ್ತು ಈ ಸಂದರ್ಭದಲ್ಲಿ ಕೂಡ ಈ ಕುಟುಂಬ ಇದೇ ರೀತಿ ಅವಾಂತರ ಮಾಡಿ, ಸ್ಥಳೀಯ ಯುವಕರ ಮೇಲೆ ಸುಳ್ಳು ಆರೋಪ ಮಾಡಿರುವ ಕೇಸು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Write A Comment