ರಾಷ್ಟ್ರೀಯ

2,200 ಭ್ರಷ್ಟ ಅಧಿಕರಿಗಳ ಪತ್ತೆ: ಸಿಬಿಐ ನಿರ್ದೇಶಕ ಅನಿಲ್‌ಸಿನ್ಹಾ ಹೇಳಿಕೆ

Pinterest LinkedIn Tumblr

cbiನವದೆಹಲಿ, ಫೆ.18- ಕಳೆದ 2015ರ ಅವಧಿಯಲ್ಲಿ 2,200 ಮಂದಿ ಹಿರಿಯ ಸರ್ಕಾರಿ ಅಧಿಕಾರಿಗಳ ಭ್ರಷ್ಟತನವನ್ನು ಗುರುತಿಸಲಾಗಿದ್ದು, ಅವರೆಲ್ಲರ ವಿರುದ್ಧ ತನಿಖೆ ನಡೆಸಲಾಗಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಅಧಿಕಾರಿಗಳು ತಿಳಿಸಿದ್ದಾರೆ. 2014ರಿಂದ ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾರ್ಯಾಚರಣೆ ಗಣನೀಯವಾಗಿ  ಏರಿಕೆಯಾಗಿದೆ ಎಂದು ಸಿಬಿಐ ಹೇಳಿದೆ. ಇದುವರೆಗೆ 2,200 ಹಿರಿಯ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿದ್ದು, ಅಕ್ರಮ ಸಂಪತ್ತುಗಳಿಕೆ ವಿರೋಧಿ ದಳ 101 ಮಂದಿ ಭ್ರಷ್ಟರವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಮದು ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ತಿಳಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಸಿಬಿಐ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಜನತೆ ಬಯಸುತ್ತಾರೆ.  ಆ ಕೆಲಸವನ್ನು ನಾವು ಮಾಡಿದ್ದೇವೆ. ಈಗ ನಮ್ಮ ಎದುರಿರುವುದು ನ್ಯಾಯಯುತ ತನಿಖೆ ಹಾಗೂ ಇತ್ಯರ್ಥವಾಗದೆ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಬಗೆಹರಿಸುವುದು ಎಂದು ಅವರು ಹೇಳಿದ್ದಾರೆ. ಕಾನೂನು ಬದ್ಧವಾದ ಕೆಲಸಗಳನ್ನು ಮಾಡಿಕೊಡುವುದಕ್ಕಾಗಿ ಸಾರ್ವಜನಿಕರಿಂದ ಭಾರೀ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೂರುಗಳನ್ನಾಧರಿಸಿ ನಡೆಸಿದ ಕಾರ್ಯಾಚರಣೆಗಳ ನಂತರ 101 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2014ರಲ್ಲಿ ಈ ಸಂಖ್ಯೆ 52  ಆಗಿತ್ತು.

2015ರಲ್ಲಿ ಅತಿ ಹೆಚ್ಚು ಅಂದರೆ 1,044 ಮಂದಿ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಿದ್ದು, ಈ ಪೈಕಿ ಉದ್ಯಮಿ ನವೀನ್ ಜಿಂದಾಲ್, ರಾಜಕಾರಣಿಗಳಾದ ಎ.ರಾಜಾ, ವೀರಭದ್ರಸಿಂಗ್ ಕೂಡ ಸೇರಿದ್ದಾರೆ ಎಂದು ಕಳೆದ 14 ತಿಂಗಳುಗಳಿಂದ ಸಿಬಿಐ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅನಿಲ್‌ಸಿನ್ಹಾ ತಿಳಿಸಿದ್ದಾರೆ. ಸಾರ್ವಜನಿಕರು ಭ್ರಷ್ಟಾಚಾರವನ್ನು ವಿರೋಧಿಸುತ್ತಾರೆ. ಅಂಥ ಜನರಿಗೆ ಸಿಬಿಐ ಅಲ್ಲದೆ ಮತ್ತಾರು ಸಹಕರಿಸಬೇಕು ಎಂದು ಪ್ರಶ್ನಿಸಿರುವ ಸಿನ್ಹಾ ಈಗಾಗಲೇ 67 ಜನ ಅಕ್ರಮ ಆಸ್ತಿಗಳಿಸಿದ ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

62 ಅಂತಾರಾಷ್ಟ್ರೀಯ ಪ್ರಕರಣಗಳನ್ನು ನಿರ್ವಹಿಸಲಾಗಿದೆ. 42 ಜನ ಭೂಗತಪಾತಕಿಗಳನ್ನು ಗುರುತಿಸಿ ಕಾನೂನು ಕೈಗೆ ಒಪ್ಪಿಸಲಾಗಿದೆ.  ಒಟ್ಟಾರೆ, ಭ್ರಷ್ಟಾಚಾರಿಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಭಾರೀ ಪ್ರಮಾಣದ ಸಾಧನೆ ಮಾಡಲಾಗಿದೆ. 2009ರಿಂದ 2012ರ ಅವಧಿಯಲ್ಲಿ ಸಿಬಿಐ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ 2,246 ಪ್ರಕರಣಗಳನ್ನು ದಾಖಲಿಸಿತ್ತು ಎಂದು ಸಿನ್ಹಾ ತಿಳಿಸಿದ್ದಾರೆ.

Write A Comment