ಮಂಗಳೂರು,ಫೆ.19: ನಗರದ ಮುಳಿಹಿತ್ಲುವಿನಲ್ಲಿ ಕಳೆದ ಎರಡು ವರ್ಷಗಳಿಂದ ಅಮೆರಿಕಾ ಮೂಲದ ಅಮೆಜ್ಹಾನ್ ಎಂಬ online ಸಂಸ್ಥೆಯ 20 ರಷ್ಟು ಕಾರ್ಮಿಕರನ್ನು ಸೇವೆಯಿಂದ ವಿನಾಕಾರಣ ವಜಾಗೊಳಿಸಿರುವುದರ ವಿರುದ್ಧ ಆಕ್ರೋಶಗೊಂಡ ಕಾರ್ಮಿಕರು ಡಿವೈಎಫ್ಐ ಸಂಘಟನೆಯ ಬೆಂಬಲವನ್ನು ಯಾಚಿಸಿದರು.
ಡಿವೈಎಫ್ಐ ಬೆಂಬಲದೊಂದಿಗೆ ಅಮೆಜ್ಹಾನ್ ಸಂಸ್ಥೆಯ ಎಲ್ಲಾ ಕಾರ್ಮಿಕರು ನಿನ್ನೆ ಮುಷ್ಕರ ಹೂಡಿ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿ ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಖಂಡಿಸಿ ಮತ್ತು ತಮ್ಮ ಕನಿಷ್ಟ ಬೇಡಿಕೆಯ ಈಡೇರಿಕೆಯ ಒತ್ತಾಯಕ್ಕೆ ಪಟ್ಟು ಹಿಡಿದರು.
ಈ ವೇಳೆ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದಂತಹ ಡಿವೈಎಫ್ಐ ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅಮೇರಿಕಾ ಮೂಲದ ಈ ಸಂಸ್ಥೆಯ ಗುತ್ತಿಗೆ ಆಧಾರದ ಮೂಲಕ ಬೇರೆ ಸಂಸ್ಥೆಗೆ ವಹಿಸಿರುವುದು ಕಾರ್ಮಿಕರನ್ನು ವಂಚಿಸಬೇಕೆಂಬುದೇ ಇವರ ಮುಖ್ಯ ಉದ್ದೇಶ. ಈ ರೀತಿ ಕಾರ್ಮಿಕರನ್ನು ವಂಚಿಸಿ ಅವರ ಶ್ರಮದಿಂದ ಅತ್ಯಾಧಿಕ ಲಾಭ ಪಡೆಯುವುದೇ ಇವರ ಮುಖ್ಯ ದ್ಯೇಯ. ಇದುವೇ ನರೇಂದ್ರ ಮೋದಿ ಹೇಳುವಂತಹ ಡಿಜಿಟಲ್ ಇಂಡಿಯಾದ ರೀತಿ. ಇಂತಹ ಸಮಸ್ಯೆಗಳ ವಿರುದ್ಧ ಕಾರ್ಮಿಕರು ಐಕ್ಯತೆಯಿಂದ ಸ್ವರ ಎತ್ತಿದರೆ ಮಾತ್ರವೇ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗುವುದೆಂದು ಅವರು ಹೇಳಿದರು.
ಈಗಾಗಲೇ ಅಮೆಜ್ಹಾನ್ ಸಂಸ್ಥೆಯು ಐಕ್ಯ ಎಂಬ ಕಂಪೆನಿಗೆ ಗುತ್ತಿಗೆ ನೀಡಿರುತ್ತಾರೆ. ಈ ಸಂಸ್ಥೆಯ ಮುಖ್ಯಸ್ಥರ ಜೊತೆ ನಿನ್ನೆ ಒಂದು ಸುತ್ತಿನ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಸಲಾಗಿಲ್ಲ ಹಾಗಾಗಿ ಇವತ್ತಿಗೂ ಪ್ರತಿಭಟನೆಯನ್ನು ಮುಂದುವರೆಲಾಯಿತು ಇಂದು ನಗರಕ್ಕೆ ಆಗಮಿಸಿದ ಅಮೆಜ್ಹಾನ್ ಸಂಸ್ಥೆಯ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಾಯಿತು ಕೊನೆಗೆ ಕಾರ್ಮಿಕರ ಬೇಡಿಕೆಯ ಈಡೇರಿಸಲಾಗುವುದೆಂಬ ತೀರ್ಮಾನದ ನಂತರ ಪ್ರತಿಭಟನೆಯನ್ನು ಹಿಂದೆ ಪಡೆಯಲಾಯಿತು.
ಪ್ರತಿಭಟನೆಯ ವೇಳೆ ಡಿವೈಎಫ್ಐ ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು. ಹಾಗೂ ಪ್ರತಿಭಟನೆಯ ನೇತೃತ್ವವನ್ನು ಅನ್ಯಾಯಕ್ಕೊಳಗಾದ ಕಾರ್ಮಿಕರಾದ ಕಿಶನ್, ಸುನಿಲ್ ಶೆಟ್ಟಿ, ಮುಂತಾದವರು ವಹಿಸಿದ್ದರು.