ಕಾನ್ಪುರ: ಕುಡಿದು ಕುಡಿದು ನಿಶಕ್ತನಾಗಿ ನೆಟ್ಟಗೆ ನಿಲ್ಲಲು ಸಾಧ್ಯವಾಗದೆ, ಶಕ್ತಿಯಿಲ್ಲದೇ ತೂರಾಡುತ್ತಿದ್ದ ವರನನ್ನು ವರಿಸಲು ಯುವತಿ ನಿರಾಕರಿಸಿ ಮದುವೆ ಮುರಿದ ಘಟನೆ ಕಾನ್ಪುರದ ಫಿರೋಜಾ ಬಾದ್ ನಲ್ಲಿ ನಡೆದಿದೆ.
ಮದುವೆ ನಡೆಸಲು ಸಮುದಾಯದ ಹಿರಿಯರು ನಡೆಸಿದ ಪಂಚಾಯಿತಿಯೂ ವಿಫಲವಾಗಿದೆ. ಒಂದು ವೇಳೆ ಕುಡುಕನನ್ನೇ ಮದುವೆಯಾಗಲು ಬಲವಂತ ಮಾಡಿದರೆ ಪ್ರಾಣ ಕಳೆದುಕೊಳ್ಳುವುದಾಗಿ ವಧು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಹುಡುಗನ ಕಡೆಯವರು ಮದುವೆ ಮನೆಯಿಂದ ಹೊರನಡೆದಿದ್ದಾರೆ. ಹುಡುಗನಿಗೆ ನೆಟ್ಟಗೆ ನಿಲ್ಲಲು ಆಗುತ್ತಿರಲಿಲ್ಲ. ಹಾರ ಹಿಡಿದುಕೊಂಡು, ಮಂಟಪಕ್ಕೆ ಬರುವ ಶಕ್ತಿಯೂ ಇಲ್ಲದೇ ತೂರಾಡುತ್ತಿದ್ದ,’ಎಂದು ವಧುವಿನ ಸಂಬಂಧಿ ಹೇಳಿದ್ದಾರೆ.
ತೂರಾಡುತ್ತಿದ್ದ ವರನನ್ನು ಕೆಟ್ಟ ಸ್ಥಿತಿಯಲ್ಲಿ ನೋಡಿದ ಹುಡುಗಿ, ಮನೆಯವರಿಗೆ ತನ್ನ ನಿರ್ಧಾರ ತಿಳಿಸಿದಳು. ಆಕೆಯ ಮನವೊಲಿಸಲು ಮನೆಯವರು ಯತ್ನಿಸಿದಾಗ, ಆತ್ಮಹತ್ಯೆಯ ಬೆದರಿಕೆ ಒಡ್ಡಿದಳು. ಕೊನೆಗೆ ಎರಡೂ ಕಡೆಯ ಹಿರಿಯರು ಮದುವೆ ನಿಲ್ಲಿಸಲು ನಿರ್ಧರಿಸಿದರು