ರಾಷ್ಟ್ರೀಯ

ವಿಮಾನದ ಗಗನಸಖಿಯರಂತೆ ರೈಲಿನಲ್ಲೂ ಬರಲಿದ್ದಾರೆ ರೈಲ್ವೆ ಸಖಿಯರು

Pinterest LinkedIn Tumblr

train-new

ನವದೆಹಲಿ: ಪ್ರಯಾಣಿಕರ ಸೌಲಭ್ಯ ನೋಡಿಕೊಳ್ಳಲು ವಿಮಾನಯಾನದಲ್ಲಿ ಗಗನಸಖಿಯರಿರುವಂತೆ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಖಿಯನ್ನು ನೇಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ದೆಹಲಿ- ಆಗ್ರಾ ನಡುವೆ ಗಂಟೆಗೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರ್ಯನಿರ್ವಹಿಸಲು ರೈಲ್ವೆ ಹೋಸ್ಟೆಸ್ ರನ್ನು ಶೀಘ್ರವೇ ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಫೆ.25ರಂದು ಮಂಡನೆಯಾಗಲಿರುವ ರೈಲ್ವೆ ಬಜೆಟ್‌ನಲ್ಲಿ ಸಚಿವ ಸುರೇಶ್‌ಪ್ರಭು ಇದನ್ನು ಘೋಷಿಸಲಿದ್ದಾರೆ.

ಈ ಏಕ್ಸ್ ಪ್ರೆಸ್ ರೈಲಿನಲ್ಲಿ ಟಿವಿ ಸೇವೆ, ಅಪಾಯ ಸೂಚನೆ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ,ಕೇಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ. ಒಂದು ತಾಸಿಗೆ 160 ಕಿ.ಮೀ. ಓಡುವ 5,4000 ಎಚ್ ಪಿ ಇಂಜಿನ್ ವಾಹನದಲ್ಲಿ 12 ಕೋಚುಗಳಿರುತ್ತದೆ. ಶತಾಬ್ದಿ ಏಕ್ಸ್ ಪ್ರೆಸ್ 200 ಕಿಲೋ ಮೀಟರ್ ಅಂತರವನ್ನು 120 ನಿಮಿಷಗಳಲ್ಲಿ ಕ್ರಮಿಸಿದರೆ, ಗತಿಮಾನ್ ಎಕ್ಸ್ ಪ್ರೆಸ್ 105 ನಿಮಿಷಗಳಲ್ಲಿ ಕ್ರಮಿಸುವ ಸಾಧ್ಯತೆಯಿದೆ.

Write A Comment