ಕರ್ನಾಟಕ

ಕೆನ್ನೆಗೆ ಹೊಡೆದು ಪತ್ನಿ ಕೊಂದ ಪತಿ

Pinterest LinkedIn Tumblr

rani

ಬೆಂಗಳೂರು: ರಾಜಗೋಪಾಲನಗರದ ಪ್ರೀತಿನಗರದಲ್ಲಿ ಗಾರ್ಮೆಂಟ್ ಉದ್ಯೋಗಿ ವಿಜಯ್ ಕುಮಾರ್ (32) ಎಂಬಾತ ತನ್ನ ಪತ್ನಿಯ ಕೆನ್ನೆಗೆ ಹೊಡೆದು ಕೊಲೆಗೈದಿರುವ ಘಟನೆ ಸೋಮವಾರ ನಡೆದಿದೆ.

ರಾಣಿ (28) ಕೊಲೆಯಾದವರು. ಆಂಧ್ರದವರಾದ ಅವರು, 6 ವರ್ಷದ ಹಿಂದೆ ಹಾಸನದ ವಿಜಯ್‌ ಕುಮಾರ್‌ನನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯ ಶೀಲ ಶಂಕಿಸಿದ್ದ ಆರೋಪಿ, ಆಗಾಗ ಜಗಳ ಮಾಡುತ್ತಿದ್ದ. ಬೆಳಿಗ್ಗೆಯೂ ಇಬ್ಬರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಆಗ ರಾಣಿ ಅವರ ಸಹೋದರ ಸೋಮಶೇಖರ್ ಇಬ್ಬರನ್ನೂ ಸಮಾಧಾನಪಡಿಸಿದ್ದರು.

ಮಧ್ಯಾಹ್ನ ಮತ್ತೆ ಜಗಳವಾಡಿದ್ದ ವಿಜಯ್ ಕುಮಾರ್ ಪತ್ನಿಯ ಕೆನ್ನೆಗೆ ಹೊಡೆದಿದ್ದ. ರಾಣಿ ಅವರ ಕಿವಿಯಿಂದ ರಕ್ತ ಸೋರಿದ್ದನ್ನು ಗಮನಿಸಿದ ಆತ, ಬಳಿಕ ಮಕ್ಕಳನ್ನು ಎತ್ತಿಕೊಂಡು ಪರಾರಿಯಾಗಿದ್ದ. ತಂದೆ ಜತೆ ಮಕ್ಕಳು ಅಳುತ್ತಾ ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡ ಅಕ್ಕಪಕ್ಕದವರು ಮನೆಯೊಳಕ್ಕೆ ಬಂದು ನೋಡಿದಾಗ, ರಾಣಿಯವರು ನೆಲದಲ್ಲಿ ಬಿದ್ದಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ಕರೆದೊಯ್ದಾಗ, ರಾಣಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ರಾಜಗೋಪಾಲನಗರ ಬಸ್‌ ನಿಲ್ದಾಣದ ಬಳಿ ಮಕ್ಕಳೊಂದಿಗೆ ನಿಂತಿದ್ದ ವಿಜಯ್‌ ಕುಮಾರ್‌ನನ್ನು ಬಂಧಿಸಲಾಯಿತು ಎಂದು ರಾಜಗೋಪಾಲನಗರ ಠಾಣೆ ಪೊಲೀಸರು ತಿಳಿಸಿದರು.

Write A Comment