ಕರ್ನಾಟಕ

ಕೌಟುಂಬಿಕ ಕಲಹ: ಒಂದೇ ಕುಟುಂಬದ 5 ಆತ್ಮಹತ್ಯೆಗೆ ಶರಣು

Pinterest LinkedIn Tumblr

suicide1

ಮಂಡ್ಯ: ನಾಗಮಂಗಲ ತಾಲೂಕಿನ ಮಾರದೇವನಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಮಾರದೇವನಹಳ್ಳಿಯ ದಿವಂಗತ ರಾಮೇಗೌಡರ ಪತ್ನಿ ಮೀನಾಕ್ಷಮ್ಮ (55), ಪುತ್ರಿಯರಾದ ಯೋಗಶ್ರೀ (20), ಪದ್ಮಶ್ರೀ (22), ಸುಚಿತ್ರಾ (26), ಮತ್ತು ಪುತ್ರ ಯೋಗಾನಂದಗೌಡ (16) ಎಂದು ಗುರುತಿಸಲಾಗಿದೆ.

3 ತಿಂಗಳ ಹಿಂದಷ್ಟೇ ಬೆಳ್ಳೂರು ಕ್ರಾಸ್ ಬಳಿ ಮೀನಾಕ್ಷಮ್ಮನವರ ಪತಿ ರಾಮೇಗೌಡ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ದಂಪತಿಗೆ ಮೂವರು ಹೆಣ್ಣುಮಕ್ಕಳು, ಓರ್ವ ಗಂಡು ಮಗ ಇದ್ದರು. 2 ವರ್ಷಗಳ ಹಿಂದೆ ಹಿರಿಯ ಮಗಳು ಸುಚಿತ್ರಾಳನ್ನು ತುಮಕೂರಿನ ಯುವಕನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಆದರೆ ಆಕೆಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಮೀನಾಕ್ಷಮ್ಮ ತಲೆ ಕೆಡಿಸಿಕೊಂಡಿದ್ದರು ಎನ್ನಲಾಗಿದೆ.

ಇಂದು ಬೆಳಗ್ಗೆ ಎಷ್ಟು ಸಮಯವಾದರೂ ಮನೆಯವರಾರೂ ಬಾಗಿಲು ತೆಗೆಯದ ಕಾರಣ ಅಕ್ಕಪಕ್ಕದ ಮನೆಯವರು ಮನೆ ಬಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಡಿವೈಎಸ್‌‌‌ಪಿ, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment