ಬೆಂಗಳೂರು: ನನಗೆ ಮಾನಸಿಕ ನೆಮ್ಮದಿ ಬೇಕು, ಒಬ್ಬಂಟಿಯಾಗಿರಲು ಬಿಟ್ಟುಬಿಡಿ ಎಂದು ನಟ ದರ್ಶನ್ ತಮ್ಮ ಆಪ್ತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಒಂದೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಅದಕ್ಕಾಗಿ ನನ್ನನ್ನು ಒಂಟಿಯಾಗಿ ಬಿಡಿ ಎಂದು ತಮ್ಮ ಆಪ್ತರ ಮುಂದೆ ಅವಲತ್ತುಕೊಂಡಿದ್ದಾರೆ. ನನಗೆ ಕೆಲ ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಸದ್ಯಕ್ಕೆ ಮಾಧ್ಯಮಗಳ ಮುಂದೆ ಬರುವ ಇರಾದೆ ನನಗಿಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೇವೆ. ಈ ಸಂಬಂಧ ಕಾಲಾವಕಾಶ ಅಗತ್ಯವಿದೆ. ತಮ್ಮನ್ನು ಒಂಟಿಯಾಗಿರಲು ಬಿಡಿ ಎಂದು ಮನವಿ ಮಾಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ದೂರಿನ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಸಂಜೆ ದರ್ಶನ್ ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಎಂದು ಡಿಸಿಪಿ ಲೋಕೇಶ್ ಕುಮಾರ್ ಹೇಳಿದ್ದಾರೆ.