ಲಂಡನ್ (ಪಿಟಿಐ): ಆಹಾರ ಪದಾರ್ಥಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ಗೋಮೂತ್ರ ಮಾರಾಟ ಮಾಡುವುದು ಬ್ರಿಟನ್ನಲ್ಲಿ ವಿವಾದ ಸೃಷ್ಟಿಸಿದೆ. ಇದಕ್ಕೆ ಹಲವು ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬಿಬಿಸಿ ತಿಳಿಸಿದೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಗೋಮೂತ್ರ ತುಂಬಿ ಧಾರ್ಮಿಕ ಉದ್ದೇಶಗಳಿಗೆ ಎಂದು ಬರೆದು ಮಾರಾಟ ಮಾಡುತ್ತಿರುವುದು ಇಲ್ಲಿನ ಹಲವು ಅಂಗಡಿಗಳಲ್ಲಿ ಕಂಡು ಬರುತ್ತಿದೆ ಎಂದು ಬಿಬಿಸಿ ಹೇಳಿದೆ.
ದಕ್ಷಿಣ ಏಷ್ಯಾ ಹಿಂದೂ ಸಮುದಾಯಗಳಲ್ಲಿ ಗೋಮೂತ್ರ ಭಾರಿ ಬೇಡಿಕೆ ಪಡೆದಿದೆ. ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಇದನ್ನು ಬಳಲಾಗುತ್ತದೆ. ಆದರೆ ಬ್ರಿಟನ್ನಲ್ಲಿ ಮಾತ್ರ ಇದರ ಮಾರಾಟ ಮಾಡುವುದು ಅಕ್ರಮ. ಮನುಷ್ಯರ ಬಳಕೆಗೆ ಗೋಮೂತ್ರವನ್ನು ಮಾರಾಟ ಮಾಡುವುದು ಕಾನೂನುಬಾಹಿರ ಎಂದು ಆಹಾರ ಸುರಕ್ಷತಾ ಏಜೆನ್ಸಿ ವಕ್ತಾರರು ಹೇಳಿದ್ದಾರೆ.
ವ್ಯಾಟ್ಫೋರ್ಡ್ನ ಹರೇಕೃಷ್ಣ ದೇವಾಲಯವು ಡೇರಿ ಫಾರ್ಮ್ ಹೊಂದಿದ್ದು, ಇಲ್ಲಿಂದಲೇ ಪೂಜೆಗೆ ಗೋಮೂತ್ರ ಪೂರೈಸಲಾಗುತ್ತದೆ.
‘ದೇವಾಲಯವು 70ರ ದಶಕದಿಂದ ಗೋಮೂತ್ರವನ್ನು ಮಾರಾಟ ಮಾಡುತ್ತಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಗೌರಿದಾಸ್ ಹೇಳಿದ್ದಾರೆ.