ಕರಾವಳಿ

ಕನ್ನಡಿಗರು ದುಬೈಯವರಿoದ ಏಪ್ರಿಲ್ 15ರಂದು ‘ಸಂಗೀತ ಸೌರಭ -2016 ‘

Pinterest LinkedIn Tumblr

Kannadigaru Dubai UAe Flyer copy.eps

ಕನ್ನಡಿಗರು ದುಬೈ ಹಾಗೂ ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟಟೈನ್ಮೆಂಟ್ ಎಲ್ ಎಲ್ ಸಿ ದುಬೈ, ಅವರು ಶುಕ್ರವಾರ 15 ಏಪ್ರಿಲ್ 2016 ರಂದು ಸಂಜೆ 5. 30ಕ್ಕೆ ಜೆ.ಎಸ್.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ದುಬೈ, ಯು ಏ ಈ ನಲ್ಲಿ ” ಶ್ರೀ ಬಾಲಾಜಿ ಬಿಲ್ಡರ್ಸ್ ಅರ್ಪಿಸುವ ‘ಸಂಗೀತ ಸೌರಭ -೨೦೧೬” – ಒಂದು ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದಾರೆ.

ಕನ್ನಡ ನಾಡಿನ ಪ್ರತಿನಿಧಿಯಾಗಿ ದುಬೈ , ಯು ಏ ಈ ಯಲ್ಲಿ ಸೇವೆ ಸಲ್ಲುಸುತ್ತಿರುವ ಈ ತಂಡ ಈಗಾಗಲೇ ಕನ್ನಡ ನಾಡಿನ ಹಿರಿಮೆ ಗರಿಮೆ ಎತ್ತಿ ಹಿಡಿಯುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಯು ಏ ಈ ಕನ್ನಡಿಗರ ಮನೆ ಮಾತಾಗಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಒಂದು ವಿಭಿನ್ನ ಕಾರ್ಯಕ್ರಮವಾದ ‘ಸಂಗೀತ ಸೌರಭ -೨೦೧೬ ‘ ಖ್ಯಾತ ಗಾಯಕಿ ಸಂಗೀತ ವಿದುಷಿ ಕು . ಇಂಚರ ರಾವ್ ಅವರ ಸುಮಧುರ ಸಂಗೀತ ಹಾಗೂ ಶ್ರೀ ಚಕ್ರವರ್ತಿ ಸೂಲಿ ಬೆಲೆ ಅವರ ಸ್ಪೂರ್ತಿದಾಯಕ ಭಾಷಣ ಕಾರ್ಯಕ್ರಮಗಳ ಸಂಯೋಜನೆಯಲ್ಲಿ ಶುಕ್ರವಾರ ೧೫ ಏಪ್ರಿಲ್ ೨೦೧೬ ರಂದು ಜೆ ಎಸ್ ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಆಡಿಟೋರಿಯಮ್ , ಅಲ್ ಬರ್ಷ, ದುಬೈ ಯು ಏ ಈ , ನಲ್ಲಿ ಮೂಡಿ ಬರಲಿದೆ.

ಝೀ ಟಿ. ವಿ ಕನ್ನಡ ಸಂಗೀತ ಕಾರ್ಯಕ್ರಮವಾದ ‘ಸರಿ ಗ ಮ ಪ ‘ ದಿಂದ ಪ್ರಾರಂಭವಾದ ಕು .ಇಂಚರ ರಾವ್ ಅವರ ಯಶಸ್ವಿ ಸಂಗೀತ ಪ್ರಯಾಣ ಇಂದು ಯಶಸ್ವಿ ‘ ರಂಗಿತರಂಗ’ ಚಲನಚಿತ್ರದ ಪ್ರಖ್ಯಾತ ಗಾನ ‘ ಕರೆಯೋಲೆ ‘ ಮೂಲಕ ಕನ್ನಡದ ಯಶಸ್ವಿ ಹಿನ್ನಲೆ ಗಾಯಕಿ ಸ್ಥಾನದಲ್ಲಿ ನಿಲ್ಲಿಸಿದೆ, ಬಹುಮುಖ ಪ್ರತಿಭಾವಂತೆಯಾದ ಬೆಂಗಳೂರು ಮೂಲದ ಕು .ಇಂಚರ ರಾವ್ ಈಗಾಗಲೇ ಸುಮಾರು ೪೦ಕ್ಕೂ ಹೆಚ್ಚಿನ ಪ್ರಖ್ಯಾತ ಹಾಡುಗಳಿಗೆ ಹಿನ್ನಲೆ ಗಾಯಕಿಯಾಗಿ ಸುಮಾರು ೨೦೦ಕ್ಕೂ ಹೆಚ್ಚಿನ ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

ಕಾರ್ಯಕ್ರಮದ ಮತ್ತೊಬ್ಬ ಕಲಾವಿದ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಬೆಂಗಳೂರಿನವರಾದ ಶ್ರೀಯುತರು ಪ್ರಖ್ಯಾತ ವಿಧ್ವಾಂಸರು, ಕಲಾವಿದರು, ವಾಗ್ಮಿಗಳು, ಪ್ರಸಿದ್ದ ಬರಹಗಾರರು, ಸಮಾಜ ಸೇವಾಕರ್ತರು, ಕಿರುತೆರೆಯ ನಿರೂಪಕರು ನಿರ್ವಾಹಕರು ಹಾಗೂ ಉಪನ್ಯಾಸಕರು ,ಬಹುಮುಖ ಪ್ರತಿಭಾವಂತರಾದ ಈ ಇಬ್ಬರು ಮೇರು ಕಲಾವಿದರ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮ ಯು ಏ ಈ ಕನ್ನಡಿಗರ ಮನರಂಜಿಸುದರಲ್ಲಿ ಸಂಶಯವಿಲ್ಲ.

Write A Comment