ಕನ್ನಡ ವಾರ್ತೆಗಳು

ಸೂಟರ್‌ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ.

Pinterest LinkedIn Tumblr

sutarpeta_kola_photo_1

ಮಂಗಳೂರು,ಮಾ.12 : ನಗರದ ಸೂಟರ್‌ಪೇಟೆಯಲ್ಲಿರುವ ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವವು ಮಾರ್ಚ್ 4 ರಿಂದ 8ರವರೆಗೆ ಅದ್ದೂರಿಯಾಗಿ ನಡೆಯಿತು. ನೇಮೋತ್ಸವದ ಮೊದಲು ಧರ್ಮಾದರ್ಶಿ ಶ್ರೀ ಭಾಸ್ಕರ್ ಐತಾಳ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಡೆಯಿತು.

ನಂತರ ಸ್ಥಳದ ಗುಳಿಗ, ಶ್ರೀ ಬಬ್ಬುಸ್ವಾಮಿ, ತನ್ನಿಮಾಣಿಗ, ರಾಹುಗುಳಿಗ, ಪಂಜುರ್ಲಿ-ಗುಳಿಗ, ಧರ್ಮದೈವ, ಸುಬ್ಯಮ್ಮ-ಸುಬ್ಬಿಗುಳಿಗ, ಸಂಕಳೆಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ನಾಲ್ಕು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ನೇಮೋತ್ಸವ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್.ಲೋಬೋ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಗುರಿಕಾರರಾದ ಶ್ರೀ ಎಸ್.ರಾಘವೇಂದ್ರ ಅವರು ಮಾತನಾಡಿ, ಶ್ರೀ ಕ್ಷೇತ್ರಕ್ಕೆ 125 ಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಪಾರಂಪರಿಕ ಭೂತಾರಾಧನೆಯನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುತ್ತಿದೆ. ಈ ದೈವಸ್ಥಾನವು ಸರ್ವಧರ್ಮೀಯರ ಭಕ್ತಿಯ ಆರಾಧನಾ ಕೇಂದ್ರವಾಗಿ ಬೆಳಗುತ್ತಿದೆ ಎಂದರು.

sutarpeta_kola_photo_2

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಕು.ಅಪ್ಪಿ ಎಸ್., ಕ್ಷೇತ್ರದ ಸಲಹೆಗಾರರಾದ ಶ್ರೀ ಕೆ.ಪಾಂಡುರಂಗ, ಶ್ರೀ ಎಸ್.ಬಾಬು, ಪ್ರಧಾನ ಕಾರ್ಯದರ್ಶಿ ಎಸ್ ಜಗದೀಶ್ಚಂದ್ರ. ಖಜಾಂಚಿ ಎಸ್. ನವೀನ್, ದೈವದ ಪಾತ್ರಿಗಳಾದ ಶ್ರೀ ಎಸ್.ಗಣೇಶ, ಪುರುಷೋತ್ತಮ, ಅರ್ಚಕರಾದ ಶ್ರೀ ಜಯ, ಪದಾಧಿಕಾರಿಗಳಾದ ಬಿ.ವಿಶ್ವನಾಥ ಸಾಲ್ಯಾನ್, ಎಸ್. ಪವಿತ್ರ, ಮೋಹನ್, ಮೋಹನ್ ದಾಸ್, ಪೂವಪ್ಪ ಎಸ್, ಗಣೇಶ್ ಬಿ, ಜನಾರ್ಧನ, ವಸಂತ, ಸುರೇಶ್, ಪ್ರವೀಣ್, ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯ್ ಫ್ರೆಂಡ್ಸ್ ಸರ್ಕಲ್, ಪ್ರಜ್ವಲ್ ಯುವಕ ಮಂಡಲ(ರಿ), ಸೂಟರ್ ಪೇಟೆ ಫ್ರೆಂಡ್ಸ್ ಸರ್ಕಲ್, ರಾಘವೇಂದ್ರ ಫ್ರೆಂಡ್ಸ್ ಸರ್ಕಲ್, ತುಳುವೆರ್‍ನ ಕೂಟ(ರಿ), ಜ್ವಾಲಿ ಫ್ರೆಂಡ್ಸ್, ವೆಲೆನ್ಸಿಯಾ ಆಟೋ ರಿಕ್ಷಾ ಚಾಲಕರ/ಮಾಲಕರ ಸಂಘ, ಸ್ತ್ರೀ ಶಕ್ತಿ ಮಹಿಳಾ ಮಂಡಲ(ರಿ), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸರ್ವ ಸದಸ್ಯರುಗಳು ನೇಮೋತ್ಸವದಲ್ಲಿ ಭಾಗಿಯಾಗಿದ್ದರು.

Write A Comment