ಕೋಲ್ಕತಾ: ಕ್ರೀಡೆ ಮತ್ತು ರಾಜಕೀಯದ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ, ತಮ್ಮ ತಂಡಕ್ಕೆ ಭಾರತದಲ್ಲಿ ಸಿಕ್ಕಷ್ಟು ಪೀತಿ ವಿಶ್ವಾಸ, ತಮ್ಮ ದೇಶ ಪಾಕಿಸ್ತಾನದಲ್ಲೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಈಡೆನ್ ಗಾರ್ಡನ್ ನಲ್ಲಿ ಟಿ 20 ಪಂದ್ಯವಾಡುವುದಕ್ಕೆ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ತಂಡ, ಭಾರತದಲ್ಲಿ ಪಂದ್ಯವಾಡುವುದನ್ನು ತಾವು ಎಂದಿಗೂ ಇಷ್ಟಪಡುವುದಾಗಿ ಹೇಳಿದ್ದಾರೆ. ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುವ ಕೆಲವು ರಾಷ್ಟ್ರಗಳಿವೆ, ಆ ರಾಷ್ಟ್ರಗಳ ಪೈಕಿ ಭಾರತವೂ ಒಂದು ಅಫ್ರಿದಿ ಹೇಳಿದ್ದಾರೆ. ಭಾರತ-ಪಾಕಿಸ್ತಾನ ಹತ್ತಿರವಾಗುವುದಕ್ಕೆ ಕ್ರಿಕೆಟ್ ಕೂಡಾ ಸಹಕಾರಿಯಾಗಿದೆ, ಆದ್ದರಿಂದ ಕ್ರೀಡೆ ಹಾಗೂ ರಾಜಕೀಯವನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.