ವಾಷಿಂಗ್ಟನ್: ಎಷ್ಟೇ ಅದ್ಧೂರಿಯಾಗಿ ಬರ್ತ್‍ಡೇ ಆಚರಿಸಿಕೊಳ್ಳುತ್ತೇವೆ ಅಂದ್ರೂ10 ಲಕ್ಷ ರೂ. ಮೀರುವುದು ಅಪರೂಪವೇ. ಆದರೆ ಅಮೆರಿಕದಲ್ಲೊಬ್ಬ ಕೋಟ್ಯಾಧಿಪತಿ ತಂದೆ ತನ್ನ ಮಗಳ ಹುಟ್ಟಿದ ಹಬ್ಬಕ್ಕೆ ಬರೋಬ್ಬರಿ 40 ಕೋಟಿ ರೂ. ವೆಚ್ಛ ಮಾಡಿದ್ದಾನೆ.
ಹೌದು, ಸ್ಯಾನ್ ಅಂಟೋನಿಯಾದಲ್ಲಿ ಕಾನೂನು ಸಂಬಂಧಿತ ಸಂಸ್ಥೆಯ ಮಾಲೀಕ ಹೆನ್ರಿ ಎಂಬಾತ ತನ್ನ ಪುತ್ರಿ ಮಯಾಳ 15 ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದಾನೆ. ಇದಕ್ಕಾಗಿ ಆತ 40.32 ಕೋಟಿ ರೂ. ವಿನಿಯೋಗಿಸಿದ್ದಾನೆ.
ಇಲ್ಲಿ 15 ವರ್ಷಕ್ಕೆ ಕಾಲಿಟ್ಟ ಹುಡುಗಿಯರಿಗೆ ವಿಶೇಷ ಮಾನ್ಯತೆ ಇದೆಯಂತೆ. 15 ವರ್ಷ ದಾಟುವ ಹುಡುಗಿಯರು ಕುಟುಂಬದ ಜವಬ್ದಾರಿ ಹೊರುವ ಸಾಮಥ್ರ್ಯವಿದೆಯೆಂದು ಹೇಳುತ್ತಾರೆ. ಹೀಗಾಗಿ ಈಕೆಯ ಹುಟ್ಟುಹಬ್ಬವನ್ನು ಇಷ್ಟು ಅದ್ಧೂರಿಯಾಗಿ ನೆರವೇರಿಸಲಾಗಿದೆ.
ಸಂಗೀತ ಕಾರ್ಯಕ್ರಮ: ಈ ಅದ್ಧೂರಿ ಹುಟ್ಟುಹಬ್ಬಕ್ಕೆ ಖ್ಯಾತ ಪಾಪ್ ಸಿಂಗರ್ಸ್ ಪಿಟ್‍ಬುಲ್ ಹಾಗೂ ಜೋನ್ಸ್ ಸಂಗೀತ ಸಂಜೆಗೆ ಮೆರುಗು ನೀಡಿದ್ದು ವಿಶೇಷವಾಗಿತ್ತು. ಅಲ್ಲದೇ ಬರ್ತ್‍ಡೇ ಗರ್ಲ್ ತನ್ನ ಮೇಕಪ್‍ಗಾಗಿ ನಟಿ ಕಿಮ್ ಕಾರ್ದಶಿಯನ್‍ನ ಮೇಕಪ್‍ಮ್ಯಾನ್ ಅನ್ನು ಕರೆಸಿದ್ದು, ಮತ್ತೊಂದು ವಿಶೇಷತೆ.