ಬೆಂಗಳೂರು: 1976ರ ಸಿನೆಮಾ ‘ಪ್ರೇಮದ ಕಾಣಿಕೆ’ಯಲ್ಲಿ ಮುಗ್ಧ ಮಗುವಾಗಿ ಕಾಣಿಸಿಕೊಂಡು, 2015ರ ‘ರಣ ವಿಕ್ರಮ’ದಲ್ಲಿ ಎ ಸಿ ಪಿಯಾಗಿ ಕಾಣಿಸಿಕೊಳ್ಳುವವರೆಗೂ ಆಕರ್ಷಣೆ ಉಳಿಸಿಕೊಂಡಿರುವವ ನಟ ಪುನೀತ್ ರಾಜಕುಮಾರ್. ಮಂಗಳವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಟ, ಅಭಿಮಾನಿಗಳು, ಗೆಳೆಯರು ಮತ್ತು ಕುಟುಂಬ ವರ್ಗದ ಜೊತೆ ಕಾಲ ಕಳೆಯಲಿದ್ದಾರಂತೆ.
ಇಷ್ಟೆಲಾ ಸಾಧನೆಗೈದಿದ್ದರು ವಿನಯ ಅತಿ ಮುಖ್ಯ ಎನ್ನುವ ನಟ “ನನಗೆ ಸಾಧನೆ ಮುಖ್ಯ ಆದರೆ ಆದರೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ಗುರಿ ತಲುಪಲು ಪ್ರಯತ್ನಿಸುತ್ತೇನೆ, ಕಾಮನಬಿಲ್ಲು ನೋಡಬೇಕೆನಿಸಿದರೆ ಮಳೆಯಲ್ಲಿ ನಡೆಯುತ್ತೇನೆ” ಎನ್ನುತ್ತಾರೆ.
ತಮ್ಮ ಯಶಸ್ಸಿಗೆ ಕುಟುಂಬ ವರ್ಗ ಮತ್ತು ತಮ್ಮ ಪತ್ನಿ ಅಶ್ವಿನಿ ಕಾರಣ ಎನ್ನುವ ನಟ “ಅವರು ನನ್ನ ಖುಷಿಗಾಗಿ ಎಂದಿಗೂ ಶ್ರಮಿಸಿದ್ದಾರೆ, ಮತ್ತು ತಾರ್ಕಿಕವಾಗಿ ಚಿಂತಿಸಲು ಪ್ರೇರೇಪಿಸುತ್ತಾರೆ. ಆದುದರಿಂದ ನನಗೆ ಯಾವುದೇ ಉದ್ವಿಘ್ನತೆ ಇಲ್ಲ” ಎಂದು ವಿವರಿಸುತ್ತಾರೆ.
“ನಾನು ಹುಟ್ಟಿದಾಗಿನಿಂದಲು ತಾರೆಯಾಗಿದ್ದರೂ, ನನ್ನ ತಾಯಿ ಮತ್ತು ತಂದೆ ನನಗೆ ಸ್ಫೂರ್ತಿಯಾಗಿದ್ದರು. ಅವರನ್ನು ಹಿಂಬಾಲಿಸಿದೆ. ನಾನು ತಾರೆಯರರ ಕುಟುಂಬದಲ್ಲಿ ಹುಟ್ಟಿದ್ದರೂ ಅದನ್ನೇ ನೆಚ್ಚಿ ಬದುಕಲು ಸಾಧ್ಯವಿಲ್ಲ. ಒಳ್ಳೆಯ ಕೆಲಸ ಮತ್ತು ಒಳ್ಳೆಯ ಜೀವನದಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ” ಎನ್ನುತ್ತಾರೆ ಪುನೀತ್.
ಇತರ ರಾಜ್ಯದ ನಟರ ಜೊತೆಗಿನ ತಮ್ಮ ಸಂಬಂಧ ಬಿಚ್ಚಿಡುವ ಅವರು “ನಾನು ಕೆಲವರ ನಟನೆಯನ್ನು ಇಷ್ಟ ಪಡುತ್ತೇನೆ ಮತ್ತು ಅದನ್ನು ಮುಕ್ತವಾಗಿ ಹೇಳುತ್ತೇನೆ. ನಾನು ಜೂನಿಯರ್ ಎನ್ ಟಿ ಆರ್, ಬನ್ನಿ (ಅಲ್ಲೂ ಅರ್ಜುನ್) ಸೂರ್ಯ, ಧನುಶ್, ವಿಶಾಲ್, ಚಿರಂಜೀವಿ ಕುಟುಂಬ ಮತ್ತಿತರಿಗೆ ಬಹಳ ಹತ್ತಿರವಾಗಿದ್ದೇನೆ” ಎಂದು ತಿಳಿಸುತ್ತಾರೆ.
ಸದ್ಯಕ್ಕೆ ‘ಚಕ್ರವ್ಯೂಹ’ ಸಿನೆಮಾದ ಬಿಡುಗಡೆಯನ್ನು ಎದುರು ನೋಡುತ್ತಿರುವ ಪುನೀತ್ ರಾಜಕುಮಾರ್, ಸಂತೋಶ್ ಆನಂದರಾಮ್ ನಿರ್ದೇಶನದ ‘ರಾಜ ಕುಮಾರ’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.