ಕನ್ನಡ ವಾರ್ತೆಗಳು

ದರ್ಶನ್‌ ದಂಪತಿಗಳ ಕುಟುಂಬ ಕಲಹಕ್ಕೆ ರಾಜ್ಯ ಮಹಿಳಾ ಆಯೋಗದಿಂದ ಪರಿಹಾರ

Pinterest LinkedIn Tumblr

darssss

ಬೆಂಗಳೂರು,ಮಾ.17:  ಚಾಲೆಂಜ್ ಸ್ಟಾರ್ ದರ್ಶನ್‌ ದಂಪತಿಯ ಕೌಟುಂಬಿಕ ಕಲಹದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನಾಧರಿಸಿಕೊಂಡು ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ದರ್ಶನ್ ದಂಪತಿಗಳಿಗೆ ಆಯೋಗದ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಸಮನ್ಸ್ ಕೂಡ ಜಾರಿಗೊಳಿಸಲಾಗಿತ್ತು.

ಅದರಂತೆ ವಿಜಯಲಕ್ಷ್ಮಿ ಬೆಳಿಗ್ಗೆ ಹಾಗೂ ದರ್ಶನ್‌ ಸಂಜೆ ಅಯೋಗದ ಮುಂದೆ ಹಾಜರಾಗಿ ‘ಕುಟುಂಬದ ಹಿರಿಯರ ಸಮ್ಮುಖದಲ್ಲಿಯೇ ನಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುತ್ತೇವೆ’ ಎಂದು ಇಬ್ಬರು ತಮ್ಮ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮಾಧ್ಯಮದವರಿಗೆ ತಿಳಿಸಿದ್ದಾರೆ.

Write A Comment