ಬಜ್ಪೆ,ಮಾ.17 : ರಾತ್ರಿ ಮಲಗಿದ್ದ ವ್ಯಕ್ತಿ ಹಗಲು ನಿಗೂಢವಾಗಿ ನಾಪತ್ತೆಯಾದ ಘಟನೆ ಬಜ್ಪೆ ಸಮೀಪದ ಮೂಡುಪೆರಾರ ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ದಾಮೋದರ ಗೌಡ(28) ಎಂದು ಗುರುತಿಸಲಾಗಿದೆ.
ಇವರು ಮಾರ್ಚ್ 9ರ ರಾತ್ರಿ ಮೂಡುಪೆರಾರ ಗ್ರಾಮದ ಕಣಿತಂಗಡಿ ಮನೆಯಲ್ಲಿ ಮಲಗಿದ್ದರು. ಆದರೆ ಬೆಳಿಗ್ಗೆ ಎದ್ದು ನೋಡುವಾಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರ ಪತ್ತೆಯಾದಲ್ಲಿ ಬಜ್ಪೆ ಠಾಣೆಗೆ (0824-2220531) ಮಹಿತಿ ನೀಡುವಂತೆ ಕೋರಲಾಗಿದೆ