ಹೈದರಾಬಾದ್, ಮಾ.17 : ಟಿವಿ ನಿರೂಪಕಿ ಆತ್ಮಹತ್ಯೆಗೆ ಶರಣಾದ ಘಟನೆ ಸಿಕಂದರಾಬಾದ್‌ನ ಸಿಂಧಿ ಕಾಲೋನಿಯಲ್ಲಿ ನಡೆದಿದೆ.ಇಲ್ಲಿಯ ಖಾಸಗಿ ವಸತಿಗೃಹದಲ್ಲಿ ನಿರೋಶಾ ಟಿವಿ ಕಾರ್ಯಕ್ರಮ ನಿರೂಪಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.23 ವರ್ಷದ ನಿರೋಶಾ ಆಂಧ್ರದ ಚಿತ್ತೂರು ಜಿಲ್ಲೆಯ ನಿಜಾಂಪೇಟೆಯವರು. ಹೈದರಾಬಾದ್‌ನಲ್ಲಿ ಟಿವಿ ಚಾನಲ್‌ವೊಂದರಲ್ಲಿ ನಿರೂಪಕಿಯಾಗಿದ್ದರು.
೨೩ ವರ್ಷದ ನಿರೋಶಾಗೆ ಇನ್ನೆರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಹೀಗಿರುವಾಗ ನಿನ್ನೆ ತಾನು ವಿವಾಹವಾಗಲಿರುವ ವ್ಯಕ್ತಿಯ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ನಿರೋಶಾ ವಸತಿ ಗೃಹದ ತಮ್ಮ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಆ ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಬಳಿಕ ನಿರೋಶಾ ಬಂಧುಗಳಿಗೆ ಮಾಹಿತಿ ನೀಡಿದ್ದಾನೆ.
ಬೆಳಗ್ಗೆ ರಾಮಗೋಪಾಲ್‌ಪೇಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿರೋಶಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಿರೋಶಾ ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.