ಕನ್ನಡ ವಾರ್ತೆಗಳು

ವಿಶ್ವ ವಿದ್ಯಾನಿಲಯದಲ್ಲಿ ‘ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪ ರೈ ಜೀವನಗಾಥೆಯ ಗ್ರಂಥ ಲೋಕಾರ್ಪಣೆ

Pinterest LinkedIn Tumblr

vv_collage_photo_1a

ಮ೦ಗಳೂರು,ಮಾ.17 : ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೇಮಾರು ಪುತ್ತೂರು, ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ‘ಗಾಂಧಿ ವಿಚಾರಧಾರೆ ಸಾರ್ವಕಾಲಿಕ ರಾಜಕೀಯ ಒಂದು ಪವಿತ್ರ ಸೇವೆ’ ಎಂಬ ಬಗ್ಗೆ ಒಂದು ವಿಚಾರ ಸಂಕಿರಣವೂ, ‘ಗಾಂಧಿ ಹೆಜ್ಜೆಯ ಜಾಡಿನಲ್ಲಿ ಜತ್ತಪ್ಪ ರೈ ಜೀವನಗಾಥೆ’ ಎಂಬ ಗ್ರಂಥದ ಲೋಕಾರ್ಪಣೆಯಾಯಿತು.

‘ಗಾಂಧಿ ಹೆಜ್ಹೆಯ ಜಾಡಿನಲ್ಲಿ – ಜತ್ತಪ್ಪ ರೈ ಜೀವನ ಗಾಥೆ’ ಎಂಬ ಗ್ರಂಥವನ್ನು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಸಂತೋಷ ಹೆಗ್ಡೆಯವರು ಬಿಡುಗಡೆಗೊಳಿಸಿದರು. ವಿಚಾರ ಸಂಕಿರಣವನ್ನು ಮಹಾತ್ಮ ಗಾಂಧಿ ಹಾಗೂ ಚಕ್ರವರ್ತಿ ರಾಜಗೋಪಾಲಾಚಾರಿಯವರ ಮೊಮ್ಮಗನೂ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾದ ಗೋಪಾಲಕೃಷ್ಣ ಗಾಂಧಿಯವರು ಉದ್ಘಾಟಿಸಿದರು.

vv_collag_photo_3 vv_collag_photo_4 vv_collag_photo_5 vv_collag_photo_6 vv_collag_photo_7 vv_collag_photo_8 vv_collag_photo_9 vv_collag_photo_10 vv_collag_photo_11 vv_collag_photo_2

ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಜತ್ತಪ್ಪ ರೈಯವರಿಗೆ ಅತ್ಯಂತ ಆತ್ಮೀಯರೂ ಆದ ಹೆಚ್.ಎಸ್.ದೊರೆಸ್ವಾಮಿ,ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ,ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಹೇರಂಜೆ ಕೃಷ್ಣ ಭಟ್ ,ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಕೆ. ಭೈರಪ್ಪ,ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ| ವಿನಯ್ ಹೆಗ್ಡೆ,ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಆದ ಪ್ರೊ. ರವಿವರ್ಮ ಕುಮಾರ್‌,ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಹೊ. ಶ್ರೀನಿವಾಸಯ್ಯ, ಕಾರ್ಯದರ್ಶಿ ಪ್ರೊ. ಜೆ.ಬಿ. ಶಿವರಾಜು ಮೊದಲಾದವರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

Write A Comment