ಕರ್ನಾಟಕ

ನಂದಿಬೆಟ್ಟಕ್ಕೆ ಸೈಕಲ್‍ನಲ್ಲಿ ಸವಾರಿ ಹೊರಟ ಪವರ್‍ಸ್ಟಾರ್

Pinterest LinkedIn Tumblr

puneeth

ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಸ್ಯಾಂಡಲ್‍ವುಡ್ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಸೈಕಲ್ ಏರಿ ಬೆಂಗಳೂರಿನ ನಿವಾಸದಿಂದ ನಂದಿಬೆಟ್ಟಕ್ಕೆ ಸವಾರಿ ಹೊರಟರು.

ಪುನೀತ್ ನಂದಿಬೆಟ್ಟದ ತನಕ ಸೈಕಲ್‍ನಲ್ಲಿ ಸವಾರಿ ಮಾಡ್ತಾರೆ ಅಂದ್ರೆ ಅದು ಸ್ಯಾಂಡಲ್‍ವುಡ್ ಪಾಲಿಗೆ ಬ್ರೇಕಿಂಗ್ ನ್ಯೂಸ್. ಇದಲ್ಲದೆ ಸ್ಯಾಂಡಲ್‍ವುಡ್‍ನ ಎನರ್ಜಿಟಿಕ್ ಸ್ಟಾರ್, ಐವತ್ತು ದಾಟಿದ್ರು ಇಪ್ಪತ್ತರ ತರುಣನಂತೆ ಕಂಗೊಳಿಸೋ ಶಿವಣ್ಣ ಕೂಡ ಸೈಕ್ಲಿಂಗ್‍ನಲ್ಲಿ ಎತ್ತಿದ ಕೈ. ಅವ್ರು ಕೂಡ ಸಮಯ ಸಿಕ್ಕಾಗೆಲ್ಲಾ ಸಯಕ್ಲಿಂಗ್ ಮಾಡ್ತಿದ್ದಾರೆ.

ಮುಂಬೈ ಬೀದಿ ಬೀದಿಯಲ್ಲಿ ಸಲ್ಲು ಸೈಕ್ಲಿಂಗ್..!: ಬಿ-ಟೌನ್‍ನಲ್ಲಿ ಸೈಕ್ಲಿಂಗ್ ಕ್ರೇಜ್ ಅಂದ್ರೆ ನೆನಪಾಗೋದು ಸಲ್ಮಾನ್‍ಖಾನ್. ಯೆಸ್ ಸಲ್ಮಾನ್ ಖಾನ್ ಆಗಾಗ ಸೈಕಲ್ ಎತ್ತಿಕೊಂಡು ಊರು ಸುತ್ತೋಕೆ ಹೊರಟುಬಿಡ್ತಾರೆ. ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಸಲ್ಮಾನ್‍ಗೆ ಸೈಕಲ್ ತುಳಿಯೋದು ಅಂದ್ರೆ ಸಖತ್ ಖುಷಿಯಂತೆ.

ಟಾಲಿವುಡ್ ಶ್ರೀಮುಂತುಡು ಸೈಕಲ್ ಬೆಲೆ 3.5 ಲಕ್ಷ..!: ಟಾಲಿವುಡ್‍ನಲ್ಲಿ ಇತ್ತೀಚೆಗೆ ಸೈಕಲ್ ಬಗ್ಗೆ ಚರ್ಚೆ ಹುಟ್ಟಿಸಿದ್ದು ಮಹೇಶ್‍ಬಾಬು. ಶ್ರೀಮಂತುಡು ಚಿತ್ರದಲ್ಲಿ ಅವರು ಸವಾರಿಗೆ ಬಳಸಿದ ವಾಹನ ಸೈಕಲ್. ಅದು ಕೂಡ 3.5 ಲಕ್ಷದ ಕಾಸ್ಟ್ಲಿ ಸೈಕಲ್ ಅನ್ನೋದು ನೆನಪಿಡಬೇಕಾದ ವಿಷಯ. ಸಿನಿಮಾ ರಿಲೀಸ್ ಆದ ಮೇಲೆ ಸೈಕಲ್ ಬಗ್ಗೆ ಎಷ್ಟು ಕ್ರೇಜ್ ಸೃಷ್ಟಿಯಾಯ್ತು ಅಂದ್ರೆ ಶ್ರೀಮಂತುಡು ಚಿತ್ರದಲ್ಲಿ ಮಹೇಶ್ ತುಳಿದಿದ್ದ ಸೈಕಲ್ ಅನ್ನು ಅಭಿಮಾನಿಯೊಬ್ಬರು ಭಾರಿ ಬೆಲೆ ಕೊಟ್ಟು ಕೊಂಡುಕೊಂಡ್ರು.

ದಿನೇ ದಿನೇ ಏರ್ತಾ ಇರೊ ಪೆಟ್ರೊಲ್-ಡಿಸೆಲ್ ಬೆಲೆ. ಜೊತೆಗೆ ಜಾಗತಿಕ ತಾಪಮಾನ, ವಾಯು ಮಾಲಿನ್ಯ ಇದನ್ನೆಲ್ಲಾ ತಡೆಗಟ್ಟಬೇಕು ಅಂದ್ರೆ ಸೈಕ್ಲಿಂಗ್ ಮಾಡೋದ್ರಿಂದ ಸಹಾಯವಾಗಬಹುದು. ಅದನ್ನು ತಾರೆಯರು ಜನಪ್ರಿಯಗೊಳಿಸಿದ್ರೆ ಸೈಕಲ್ ಸವಾರಿ ಯುವಜನಾಂಗದವರಲ್ಲೂ ಕೂಡ ಕ್ರೇಜ್ ಸೃಷ್ಟಿಸಿದ್ರೆ ಅಚ್ಚರಿ ಇಲ್ಲ.

Write A Comment