ಮಂಗಳೂರು: ಪಾಕಿಸ್ತಾನಕ್ಕೆ ಜೈ, ಪಾಕಿಸ್ತಾನ ಜಿಂದಾಬಾದ್ ಎಂಬ ಸಂದೇಶ ಕಳುಹಿಸಿದ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸತ್ತಿಕಲ್ ನಿವಾಸಿ ಸಫಾನ್ ಹಾಗೂ ಸವಣೂರು ನಿವಾಸಿ ಅಬ್ದುಲ್ ರಶೀದ್ ಬಂಧಿತ ಆರೋಪಿಗಳು. ಇವರಿಬ್ಬರು ಪಾಕಿಸ್ತಾನಕ್ಕೆ ಜೈ, ಪಾಕಿಸ್ತಾನ ಜಿಂದಾಬಾದ್ ಎಂಬ ಸಂದೇಶವನ್ನು ವಾಟ್ಸ್ಪ್ನಲ್ಲಿ ಕಳುಹಿಸಿದ ಬಗ್ಗೆ ದೂರು ದಾಖಲಾಗಿದೆ.
ಮಾರ್ಚ್ 21 ರಂದು ನಡೆದು ಭಾರತ್-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಈ ಯುವಕರು ಪಾಕಿಸ್ತಾನದ ಪರವಾಗಿ ವಾಟ್ಸ್ಪ್ನಲ್ಲಿ ಜಯಘೋಷ ಸಂದೇಶಗಳನ್ನು ಕಳುಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಫಾನ್ ಹಾಗೂ ಅಬ್ದುಲ್ ರಶೀದ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಿದ್ದಾರೆ.