ಮಂಗಳೂರು : ದೇಶದಾದ್ಯಂತ ಇಂದು ಹೋಳಿ ಹಬ್ಬದ ಸಂಭ್ರಮವನ್ನು ಆಚರಿಸಿದ್ದು, ಮಂಗಳೂರಿನಲ್ಲೂ ಹಲವೆಡೆಗಳಲ್ಲಿ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಗರವಿಡೀ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.
ಕೆಲವು ವರ್ಷಗಳ ಹಿಂದೆ ಉತ್ತರ ಭಾರತದ ಜನರು ಹೋಳಿ ಆಚರಣೆ ಮಾಡುತ್ತಿದ್ದರು. ಕ್ರಮೇಣ ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ದೇಶಾದ್ಯಂತ ಹೋಳಿಹಬ್ಬವನ್ನು ಆಚರಿಸಲಾಯಿತು. ಕಾಲಬದಲದಂತೆ ವಯಸ್ಸಿನ ಮಿತಿಯಿಲ್ಲದೇ ಎಲ್ಲಾ ವಯಸ್ಸಿನವರು ಪರಸ್ಪರ ಬಣ್ಣಗಳನ್ನು ಎರಚುವ ಮೂಲಕ ಹೋಳಿ ಹಬ್ಬವನ್ನು ಆಚರಿಸುತ್ತಾ ಬಂದರು.
ವ್ಯವಹಾರ ನಿಮಿತ್ತ ಮಂಗಳೂರಿಗೆ ಬಂದಿ ಇಲ್ಲೆ ನೆಲೆಸಿರುವಂತಹ ರಾಜಸ್ಥಾನದ ಮಂದಿ ನಗರದ ಸೌಟ್ ಭವನದಲ್ಲಿ ಹೋಳಿಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಒಬ್ಬರಿಗೊಬ್ಬರು ಪರಸ್ಪರ ಬಣ್ಣಬಣ್ಣದ ನೀರು ಎರಚುವ ಮೂಲಕ ಕರಾವಳಿಯಲ್ಲೂ ಬಣ್ಣಗಳ ಮಾಯಲೋಕವೇ ಸೃಷ್ಠಿಯಾಯಿತು.