ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆ ಎಸೆತದಿಂದ ಪಂದ್ಯದ ದಿಕ್ಕನ್ನೇ ಬದಲಿಸಿ ಬಾಂಗ್ಲಾದೇಶದ ವಿರುದ್ಧ ಟಿ20 ವಿಶ್ವಕಪ್ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಆಟಗಾರರು ಇಂದು ಹೋಳಿ ಸಂಭ್ರಮದಲ್ಲಿದ್ದಾರೆ.
ಭಾರತ ತಂಡದ ಬಸ್ನಲ್ಲಿ ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್, ಯುವರಾಜ್ಸಿಂಗ್ ಮತ್ತು ಇತರರಿಗೆ ವಿರಾಟ್ ಕೋಹ್ಲಿ ಬಣ್ಣ ಹಚ್ಚಿ ಹ್ಯಾಪಿ ಹೋಳಿ ಎಂದು ಹೇಳಿದ್ದಾರೆ
ಟಿಂ ಇಂಡಿಯಾ ಮಾರ್ಚ್ 27 ರಂದು ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನು ಮೊಹಾಲಿಯಲ್ಲಿ ಆಡಲಿದೆ.