ಬಂಟ್ವಾಳ,ಮಾ.29: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಹೊಸ ಸೇತುವೆ ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನಾಗೇಂದ್ರ ನೇತೃತ್ವದಲ್ಲಿ ನಗರ ಠಾಣೆ ಪೊಲೀಸರು ಭಾನುವಾರ ರಾತ್ರಿ ಮತ್ತು ಸೋಮವಾರ ಕಾರ್ಯಾಚರಣೆ ನಡೆಸಿ ಆರು ಟಿಪ್ಪರ್ ಮಳು ಸಹಿತ ಚಾಲಕರನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಉಮೇಶ, ಸುಭಾಶ್, ಖಾಸಿಂ, ಗೋಪಾಲ ಪೂಜಾರಿ, ಮಹಮ್ಮದ್ ಆಸಿಫ್, ಮುಖೇಶ್ ಎಂದು ಗುರುತಿಸಲಾಗಿದೆ.
ಇವರಿಂದ ಒಟ್ಟು ಆರು ಲೋಡ್ ಮರಳು ಸಹಿತ ಟಿಪ್ಪರ್ ಸಹಿತ ಒಂದು ಬೋಟ್ ಮತ್ತು ಒಂದು ಜೆಸಿಬಿ ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ ರೂ 34.5ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕಳವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.