ಮಂಗಳೂರು, ಎ. 4: ಎಕ್ಕೂರು ಸಮೀಪದ ಜಪ್ಪಿನಮೊಗರು ಕಂರ್ಬಿಸಾನದ ಬಳಿ ಬೈಕ್ನಲ್ಲಿ ಬಂದ ಮೂರು ಮಂದಿಯ ತಂಡವೊಂದು ಯುವಕನೊಬ್ಬನಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಪರಾರಿಯಾದ ಘಟನೆ ರವಿವಾರ ರಾತ್ರಿ ನಡೆದಿದೆ.
ಚೂರಿ ಇರಿತಕ್ಕೊಳಗಾದ ಯುವಕನನ್ನು ಆಶಿತ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತ ಅಭಿಷೇಕ್ ಎಂಬವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ಆತನನ್ನು ಮತ್ತೊಂದು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಅನ್ಯ ಕೋಮಿನ ಮೂವರ ತಂಡ ಆಶಿತ್ನ ಬೈಕ್ಗೆ ಢಿಕ್ಕಿ ಹೊಡೆದು, ಕೆಳಗೆ ಬಿದ್ದ ಆಶಿತ್ಗೆ ಚೂರಿಯಿಂದ ಇರಿದು ಪರಾರಿಯಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಆಶಿತ್ನನ್ನು ಅತನ ಸ್ನೇಹಿತ ಅಭಿಷೇಕ್ ಸ್ಥಳೀಯರ ಸಹಾಯದಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲುಮಾಡಿದ್ದಾನೆ ಎನ್ನಲಾಗಿದೆ.
ಚೂರಿ ಇರಿತಕ್ಕೂ ಮೊದಲು ಆಸ್ಪತ್ರೆಯೊಂದರಲ್ಲಿ ಕ್ಷುಲ್ಲಕ ಕಾರಣಕಾಗಿ ಆಶಿತ್ ಮೇಲೆ ಹಲ್ಲೆ ನಡೆಸಿರುವ ತಂಡ ಮತ್ತೆ ಬೆನ್ನಟಿಕೊಂಡು ಬಂದು ಹಲ್ಲೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.