ಫ್ಲೋರಿಡಾ: ನೀವು ಸಾಮಾನ್ಯವಾಗಿ ಯಾವುದಾದರೂ ಹೋಟೆಲ್‍ನಲ್ಲಿ ಕಲಾತ್ಮಕ ಚಿತ್ರಗಳನ್ನ ಏರ್ಪಡಿಸುವ ಬಗ್ಗೆ ಕೇಳಿರುತ್ತೀರಿ. ಆದ್ರೆ ಅಮೆರಿಕದ ಫ್ಲೋರಿಡಾದಲ್ಲಿ ಸಮುದ್ರದ ಮಧ್ಯೆ ಚಿತ್ರಕಲಾ ಪ್ರದರ್ಶನವನ್ನ ಏರ್ಪಡಿಸಲಾಗಿದೆ.
ಫ್ಲೋರಿಡಾ ಕೀಸ್ ದ್ವೀಪದಲ್ಲಿ ಆ್ಯಂಡ್ರಿಯಾಸ್ ಫ್ರಾಂಕ್ ಎಂಬ ಕಲಾವಿದೆ ಹಡಗೊಂದನ್ನು ಸಮುದ್ರದಲ್ಲಿ ಮುಳುಗಿಸಿ ಅದರಲ್ಲಿ ಫೋಟೋಗಳನ್ನು ಜೋಡಿಸಿ ವಿಶಿಷ್ಟವಾದ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಈ ಹಿಂದೆ ವಾಯುಪಡೆಯ ಕ್ಷಿಪಣಿಯನ್ನು ಪತ್ತೆ ಹಚ್ಚುತ್ತಿದ್ದ ಜನರಲ್ ಹಾಯ್ಟ್ ಎಸ್ ವ್ಯಾಂಡೆನ್‍ಬರ್ಗ್ ಹೆಸರಿನ ಹಡಗನ್ನು ಸಮುದ್ರದಲ್ಲಿ ಮುಳುಗಿಸಿ ಪ್ರದರ್ಶನಕ್ಕಾಗಿ ಬಳಸಿಕೊಳ್ಳಲಾಗಿದೆ.
ಈ ಪ್ರದರ್ಶನ ಆ್ಯಂಡ್ರಿಯಾಸ್ ಅವರ ಎರಡನೇ ಕಲಾ ಪ್ರದರ್ಶನವಾಗಿದ್ದು, 2009ರಲ್ಲಿಯೂ ಇದೇ ಹಡಗಿನಲ್ಲಿ ‘ದಿ ಸಿಂಕಿಂಗ್ ವಲ್ರ್ಡ್’ ಎಂಬ ಶಿರ್ಷಿಕೆಯಡಿಯಲ್ಲಿ ಪ್ರದರ್ಶನವನ್ನು ಏರ್ಪಡಿಸಿದ್ದರು.