ಅಂತರಾಷ್ಟ್ರೀಯ

70 ವರ್ಷಗಳ ನಂತರ ಒಂದಾದ ಪ್ರೇಮಿಗಳ ಮದುವೆ !

Pinterest LinkedIn Tumblr

2

ಲಂಡನ್‌ : ಎರಡನೇ ಮಹಾಯುದ್ಧದ ಕಾರಣಕ್ಕೆ ನಿಂತು ಹೋಗಿದ್ದ ಪ್ರೇಮಿಗಳ ಮದುವೆಗೆ 70 ವರ್ಷಗಳ ನಂತರ ಇದೀಗ ಕಾಲ ಕೂಡಿ ಬಂದಿದೆ. 90 ವರ್ಷದ ರಾಯ್‌ ವಿಕೆರ್ಮಾನ್‌ ಅವರು 89 ವರ್ಷದ ನೊರಾ ಜಾಕ್ಸ್‌ನ್‌ ಅವರನ್ನು ವರಿಸಲಿದ್ದಾರೆ.

ಇಂಗ್ಲೆಂಡ್‌ನ ಸ್ಟೊಕ್‌–ಆನ್‌–ಟ್ರೆಂಟ್‌ ನಗರದ ಶಾಲೆಯೊಂದರಲ್ಲಿ 1940ರಲ್ಲಿ ಇಬ್ಬರೂ ಭೇಟಿಯಾಗಿದ್ದರು. 1946ರಲ್ಲಿ ಅವರು ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಧ್ಯವಾಗಲೇ ಇಲ್ಲ.

ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಕಾರಣ ರಾಯ್‌ ವಿಕೆರ್ಮಾನ್‌ ಆಘಾತಕ್ಕೆ ಒಳಗಾದರು. ಅಲ್ಲದೇ, ಇಬ್ಬರಿಗೂ ಭೇಟಿಯಾಗುವ ಅವಕಾಶವೂ ದೊರಕಲಿಲ್ಲ. ರಾಯ್‌ ಅವರು ಸುಮಾರು 70 ವರ್ಷಗಳ ಕಾಲ ಪ್ರೇಯಸಿಯನ್ನು ಕಳೆದುಕೊಂಡ ದುಃಖದಲ್ಲಿ ಕಾಲ ಕಳೆದರು.

ಪ್ರೇಯಸಿಗಾಗಿ ನಡೆಸಿದ ಹುಡುಕಾಟದ ಪ್ರಯತ್ನಗಳು ಫಲ ನೀಡಲಿಲ್ಲ. ನಂತರ ಸ್ಥಳೀಯ ರೇಡಿಯೊ ಕೇಂದ್ರದ ನೆರವು ಪಡೆದು ನೋರಾ ಅವರನ್ನು ಪತ್ತೆ ಮಾಡಿದರು.

ಕೇವಲ ಎರಡು ಮೈಲುಗಳ ದೂರದಲ್ಲಿ ನೋರಾ ಇರುವುದು ಗೊತ್ತಾಯಿತು. ನೋರಾ ಮನೆಗೆ ಹೂಗುಚ್ಛಗಳೊಂದಿಗೆ ರಾಯ್‌ ತೆರಳಿದಾಗ ಇಬ್ಬರ ಸಂತಸಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಪರಸ್ಪರ ಅಪ್ಪಿಕೊಂಡು ಸಂಭ್ರಮಪಟ್ಟರು.

Write A Comment