ಸಕಲೇಶಪುರ: ತಾಲೂಕಿನ ಹೊಸೂರು ಗ್ರಾಮದ ಬಳಿ ಮಂಗಳೂರು-ಹಾಸನ-ಅರಸೀಕೆರೆ ರೈಲು ಮಾರ್ಗದಲ್ಲಿ ಮಂಗಳವಾರ ಹಳಿ ದಾಟುತ್ತಿದ್ದ ನಾಲ್ಕು ಜಿಂಕೆಗಳು ರೈಲಿಗೆ ಸಿಲುಕಿ ಸಾವಿಗೀಡಾಗಿವೆ.
ಕಾಫಿತೋಟದಿಂದ ನಾಲ್ಕು ಜಿಂಕೆಗಳು ಹಳಿ ದಾಟುತ್ತಿದ್ದ ವೇಳೆ ಎರಡು ಜಿಂಕೆಗಳ ದೇಹ ಛಿದ್ರವಾಗಿದೆ. ಇನ್ನೆರಡು ಜಿಂಕೆಗಳು ತೀವ್ರ ಗಾಯಗೊಂಡು ಸಾವಿಗೀಡಾಗಿವೆ. ವಿಷಯ ವಿಷಯ ತಿಳಿದು ಅರಣ್ಯಾಧಿಕಾರಿ ಸುದರ್ಶನ್ ಮತ್ತಿತರ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜಿಂಕೆಗಳ ಕಳೇಬರದ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಿದರು. ಈ ಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 20 ಜಿಂಕೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ.