ಕನ್ನಡ ಸಿನಿಮಾಗಳು ವಿದೇಶದಲ್ಲಿ ಬಿಡುಗಡೆಯಾಗುವುದು ಕೇಳಿರ್ತಿರಿ, ಇಲ್ಲಾ ಕನ್ನಡ ಚಿತ್ರಗೀತೆಗಳನ್ನು ಫಾರಿನ್’ನಲ್ಲಿ ಶೂಟಿಂಗ್ ಮಾಡಿರುವುದನ್ನು ನೋಡಿರ್ತೀರಿ.
ಆದರೆ ಇಲ್ಲೊಂದು ವಿದೇಶಿ ನೃತ್ಯ ತಂಡ ಕನ್ನಡ ಭಾಷಾಭಿಮಾನ ಮೂಡಿಸುವ ಗೀತೆಯೊಂದಕ್ಕೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗಾಂಚಲಿ ಬಿಡಿ ಕನ್ನಡ ಮಾತಾಡಿ ಎಂಬ ತತ್ವದೊಂದಿಗೆ ಯುವ ಪ್ರತಿಭೆಗಳಾದ ಕನ್ನಡ RAPPER All ok ಅಲೋಕ್, RJ ಪ್ರ.ದೀ.ಪ ಮತ್ತು ಹಿಪ್ ಹಾಪ್ ಕನ್ನಡಿಗರು ಸೇರಿ ಈ ಹಿಂದೆ YOUNG ಎಂಗೋ” ಎನ್ನುವ ಆಲ್ಬಂ ನಿರ್ಮಿಸಿದ್ದರು.
ಈ ಸೆನ್ಸೇಶನಲ್ ಹಿಟ್ ಆಲ್ಬಂ ಗೀತೆಗೆ ವಿಯೆಟ್ನಾಂ ದೇಶದ ನೃತ್ಯ ತಂಡವೊಂದು ನೃತ್ಯ ಸಂಯೋಜಿಸಿ ವಿದೇಶದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಮೂಲತಃ ಕರ್ನಾಟಕದವರಾದ ನೃತ್ಯ ನಿರ್ದೇಶಕ #Happy ಆನಂದ್ ಮತ್ತು ವಿದೇಶಿ ನೃತ್ಯ ತಂಡ GAMEON ಈ ಹಾಡಿಗೆ ಕೊರಿಯೊಗ್ರಾಫಿ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಈ ನೃತ್ಯಗೀತೆಯನ್ನು ವಿಯೆಟ್ನಾಂ ಸ್ಟ್ರೀಟ್’ನಲ್ಲಿ ಸಿಂಗಲ್ ಟೇಕ್’ನಲ್ಲಿ ಚಿತ್ರೀರಿಕರಿಸಿರುವುದು ಈ ತಂಡದ ಮತ್ತೊಂದು ವಿಶೇಷ.
ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ ಈ ವಿದೇಶಿ ನೃತ್ಯ ತಂಡಕ್ಕೆ ಹಾರೈಸುತ್ತಾ….
Talk ರಾಜ Talk
ಕರ್ನಾಟಕದಲ್ಲಿ comeಡ, goಡ, ಎನ್ನಡ, ಎಕ್ಕಡ…ಇದೆಲ್ಲದಕ್ಕಿಂತ ಮುಂಚೆ ಬಂದಿದ್ದೇ ನಮ್ ಕನ್ನಡ. ಆದ್ರಿಂದ ಗೊತ್ತಿರೋರು ಇದನ್ನು ಬೆಳೆಸ್ಬೇಕು…ಗೊತ್ತಿಲ್ದಿರೋರು ಇದನ್ನು ಕಲಿಬೇಕು.
*ಕಪ್ಪು ಮೂಗುತ್ತಿ
-ಉದಯವಾಣಿ