ರಾಷ್ಟ್ರೀಯ

5 ರಾಜ್ಯಗಳಿಗೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ

Pinterest LinkedIn Tumblr

rajnath-amit-shahನವದೆಹಲಿ: ವಿವಿಧ ರಾಜ್ಯಗಳ ವಿಧಾನಸಭೆ ಪ್ರಗತಿಯಲ್ಲಿರುವ ಸಮಯದಲ್ಲೇ ಬಿಜೆಪಿ ಪಕ್ಷ ಐದು ರಾಜ್ಯಗಳ ರಾಜ್ಯಾಧ್ಯಕ್ಷರನ್ನು ನೇಮಿಸಿ ಅಮಿತ್ ಶಾ ನೇತೃತ್ವದ ಬಿಜೆಪಿ ಪಕ್ಷ ಪ್ರಕಟಣೆ ಹೊರಡಿಸಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಕರ್ನಾಟಕ ಸೇರಿದಂತೆ ಒಟ್ಟು ಐದು ರಾಜ್ಯಗಳ ಬಿಜೆಪಿ ಘಟಕಕ್ಕೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಕರ್ನಾಟಕಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಿಎಸ್ ಯಡಿಯೂರಪ್ಪ ನೇಮಕವಾಗಿದ್ದರೆ, ತೆಲಂಗಾಣದ ರಾಜ್ಯಾಧ್ಯಕ್ಷರನ್ನಾಗಿ ಡಾ. ಕೆ.ಲಕ್ಷ್ಮಣ್ ಅವರನ್ನು ನೇಮಕ ಮಾಡಲಾಗಿದೆ. ಅಂತೆಯೇ ಅರುಣಾಚಲ ಪ್ರದೇಶದ ರಾಜ್ಯಾಧ್ಯಕ್ಷರನ್ನಾಗಿ ತಾಪೀರ್ ಗಾವ್, ಉತ್ತರ ಪ್ರದೇಶದ ರಾಜ್ಯಾಧ್ಯಕ್ಷರನ್ನಾಗಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಪಂಜಾಬ್ ರಾಜ್ಯಾಧ್ಯಕ್ಷರಾಗಿ ವಿಜಯ್ ಸಾಂಪ್ಲಾ ಅವರನ್ನು ನೇಮಕ ಮಾಡಿದೆ.
2019ರಲ್ಲಿ ನಡೆಯಬೇಕಾದ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರಾಷಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈ ಬದಲಾವಣೆ ಮಾಡಿದ್ದು, ಹೊಸದಾಗಿ ನೇಮಕವಾಗಿರುವ ಎಲ್ಲಾ ನೂತನ ಅಧ್ಯಕ್ಷರಿಗೆ ಪಕ್ಷ ಸಂಘಟಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ 13 ಉಪಾಧ್ಯಕ್ಷರನ್ನು, 9 ಪ್ರಧಾನ ಕಾರ್ಯದರ್ಶಿ, 15 ಕಾರ್ಯದರ್ಶಿಗಳನ್ನೂ ಹೊಸದಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Write A Comment