ತಿರುವನಂತಪುರಂ: ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಿ ದೇವಾಲಯದಲ್ಲಿ ನಡೆದ ಪಟಾಕಿ ದುರಂತದ ರಕ್ಷಣಾ ಕಾರ್ಯಗಳಿಗಾಗಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರ್ಕಾರ ರು. 20 ಕೋಟಿ ಘೋಷಿಸಿದೆ.
ಮಂಗಳವಾರ ಸುದ್ದಿ ಮಾಧ್ಯಮದವರ ಜತೆ ಮಾತನಾಡಿದ ಚಾಂಡಿ ಇನ್ನು 13 ಮೃತದೇಹದ ಗುರುತು ಪತ್ತೆಯಾಗಲು ಬಾಕಿ ಇದೆ ಎಂದಿದ್ದಾರೆ. ಈವರೆಗೆ 1039 ಮಂದಿಗೆ ಚಿಕಿತ್ಸೆ ನೀಡಿದ್ದು 27 ಮಂದಿಯ ಸ್ಥಿತಿ ಗಂಭೀರವಾಗಿದೆ.
ಅದೇ ವೇಳೆ ಅಪ್ಪ ಅಮ್ಮನನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಅಭಯ ನೀಡುವುದಾಗಿ ಚಾಂಡಿ ಭರವಸೆ ನೀಡಿದ್ದಾರೆ.
ಏತನ್ಮಧ್ಯೆ, ಪಟಾಕಿ ನಿಷೇಧದ ಬಗ್ಗೆ ಚರ್ಚೆ ನಡೆಸಲು ಏಪ್ರಿಲ್ 14 ಗುರುವಾರ ಮಧ್ಯಾಹ್ನ 2 ಗಂಟೆಗೆ ಸರ್ವ ಪಕ್ಷಗಳ ಸಭೆ ಕರೆದಿರುವುದಾಗಿ ಅವರು ಹೇಳಿದ್ದು, ಪಟಾಕಿ ನಿಷೇಧ ಬೇಕೋ ಬೇಡವೋ ಎಂಬುದರ ಬಗ್ಗೆ ಎಲ್ ಪಕ್ಷಗಳ ಅಭಿಪ್ರಾಯಗಳನ್ನು ಕೇಳಲಾಗುವುದು ಎಂದಿದ್ದಾರೆ.