ಮಂಗಳೂರು,ಏ.12: ಅಖಿಲ ಭಾರತೀಯ ಹಿಂದೂ ಮಹಾಸಭಾದ ಮೇಲಿನ ಭಯದಿಂದ ಬ್ರಿಟಿಷ್‌ರು ಭಾರತವನ್ನು ಬಿಟ್ಟು ಹೋದರು ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ. ಚಂದ್ರ ಪ್ರಕಾಶ್ ಕೌಶಿಕ್ ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಹಿಂದೂ ಮಹಾಸಭಾ ಒಂದು ರಾಜಕೀಯ ಪಕ್ಷವಾಗಿ ಸ್ವಾತಂತ್ರ್ಯಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಬ್ರಿಟಿಷರು ಭಾರತವನ್ನು ಬಿಡಲು ಅನೇಕ ತ್ಯಾಗ ಮಾಡಿದ್ದಾರೆ, ಮಾತ್ರವಲ್ಲದೇ ಹೋರಾಟದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾದ 72,000 ಸದಸ್ಯರು ಕಳೆದುಕೊಂಡು, 64,000 ಸದಸ್ಯರು ಜೈಲುವಾಸ ಸೇರಬೇಕಾಯಿತು ಎಂದು ಹೇಳಿದರು.
ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ನಡೆದ ಕರ್ನಾಟಕ ರಾಜ್ಯ ಘಟಕದ ಪದಗ್ರಹಣ ಸಮಾವೇಶದಲ್ಲಿ ರಾಜ್ಯದ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಅಂಬಿಕಾ ನಾಯಕ್ ಅವರನ್ನು ಜಿಲ್ಲಾ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಿಲಾಗಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ. ಚಂದ್ರ ಪ್ರಕಾಶ್ ಕೌಶಿಕ್ ಹೇಳಿದರು
ಹಿಂದೂ ಮಹಾಸಭಾದ ಏಕೈಕ ಉದ್ದೇಶವೆಂದರೇ ಹಿಂದೂ ರಾಷ್ಟ್ರದ ರಚನೆಯ ಹೊರತು ಇತರ ಧರ್ಮಗಳ ಜನರನ್ನು ಅಟ್ಟಿಸಿಕೊಂಡು ಹೋಗುವುದು ಅಲ್ಲ ಎಂದು ಸಮಿತಿಯ ನೂತನ ಅಧ್ಯಕ್ಷೆ ಶ್ರೀಮತಿ ಅಂಬಿಕಾ ನಾಯಕ್ ಹೇಳಿದರು.
ರಾಜ್ಯ ಉಪಾಧ್ಯಕ್ಷ ಶ್ರೀ ಶ್ರಾವಣ ಕುಮಾರ್, ಜಿಲ್ಲಾಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷ ಚೇತನ್ ಮಲ್ಯ ,ಕಾರ್ಯದರ್ಶಿ ಎನ್ ಪಿ ಶೆಣೈ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು