ಕನ್ನಡ ವಾರ್ತೆಗಳು

ಕೂಳೂರು: ಅಯ್ಯಪ್ಪ ಮಂದಿರದ ಸ್ವಾಗತ ಗೋಪುರ‌ ಉದ್ಘಾಟನೆ

Pinterest LinkedIn Tumblr

Ayyappa_Temple_photo

ಮಂಗಳೂರು,ಎ.12:  ದೇಶದಾದ್ಯಂತ‌ ಅತ್ಯಂತ ಸರಳತೆಯಿಂದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪೂಜಿಸುವ‌ ಅಯ್ಯಪ್ಪ ಭಕ್ತರು ನಿಜ ಅರ್ಥದ ಜಾತ್ಯತೀತ ಮನೋಭಾವವನ್ನು ಹೊಂದಿದ್ದಾರೆ ‌ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ ‌ಅವರು ಹೇಳಿದರು.

ಎ.೧೦ರಂದು ಮಂಗಳೂರಿನ ಕೂಳೂರಿನ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಿರ್ಮಾಣಗೊಂಡ ನೂತನ ಸ್ವಾಗತ ಗೋಪುರವನ್ನು‌ ಉದ್ಘಾಟಿಸಿ,ಅವರು ಆಶೀರ್ವಚನ ನೀಡಿದರು.

ಮುಖ್ಯ‌ಅತಿಥಿಯಾಗಿ ಪಾಲ್ಗೊಂಡ ಅಖಿಲ ಭಾರತ‌ ಅಯ್ಯಪ್ಪ ಸೇವಾ ಸಂಘದ‌ ಉಪಾಧ್ಯಕ್ಷ ವಿಜಯಕುಮಾರ್‌ ಅವರು ಮಾತನಾಡಿ, ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ ಸೇವಾ ಸಂಘವು ಸರ್ವ ವಿಧದ ಸಹಕಾರ ನೀಡುತ್ತಿದ್ದು, ಕರ್ನಾಟಕದಿಂದ ಆಗಮಿಸುವ ಭಕ್ತರಿಗೆ ನೂತನ ಕರ್ನಾಟಕ ಭವನ ನಿರ್ಮಾಣಗೊಳ್ಳುತ್ತಿದೆ ಎಂದರು.

ಇನ್ನೋರ್ವ ಮುಖ್ಯ‌ ಅತಿಥಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್‌ ಅವರು ಮಾತನಾಡಿ, ಕರ್ನಾಟಕದ ಭಕ್ತರಿಗಾಗಿ ಶಬರಿಮಲೆಯಲ್ಲಿ ಅಳವಡಿಸಲಾದ ಕನ್ನಡ ಭಾಷೆಯ ಸೂಚನಾ ಫಲಕದಲ್ಲಿ ಅನೇಕ ಕಾಗುಣಿತ, ವ್ಯಾಕರಣ ದೋಷವಿದ್ದು, ಇದನ್ನು ಸರಿಪಡಿಸುವಲ್ಲಿ‌ ಅಯ್ಯಪ್ಪ ಸೇವಾ ಸಂಘ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ವಿನಂತಿಸಿದರು.

ಕ್ಷೇತ್ರದತಂತ್ರಿ ವೇದಮೂತಿ೯ ಶಶಿಧರತಂತ್ರಿ, ಉದ್ಯಮಿ ಸುಧೀರ್‌ಪ್ರಸಾದ್ ಶೆಟ್ಟಿ, ಕಾರ್ಪೊರೇಟರ್ ದಯಾನಂದ ಶೆಟ್ಟಿ, ವಿದ್ಯಾರತ್ನ ಟ್ರಸ್ಟ್‌ನ‌ ಅಧ್ಯಕ್ಷ ರವೀಂದ್ರ ಶೆಟ್ಟಿ, ಕೆ.ಎನ್.ಎಸ್.ಎಸ್.ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ್, ಕ್ರೀಡಾ ಭಾರತಿಯ‌ ಅಧ್ಯಕ್ಷಕೆ. ಚಂದ್ರಶೇಖರ ರೈ, ಕ್ಷೇತ್ರದ ಆಡಳಿತ ಮಂಡಳಿಯ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಅಯ್ಯಪ್ಪಕ್ಷೇತ್ರದ‌ಅಧ್ಯಕ್ಷ ಎಂ.ಸುರೇಶ್‌ಚಂದ್ರ ಶೆಟ್ಟಿ ಸ್ವಾಗತಿಸಿದರು. ದಯಾನಂದಕತ್ತಲ್‌ಸಾರ್ ಕಾಯ೯ಕ್ರಮ ನಿವ೯ಹಿಸಿ, ವಂದಿಸಿದರು.

Write A Comment