ಕರ್ನಾಟಕ

ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ರಾಜ್‌ಕುಮಾರ್ ! ಡಾ. ರಾಜ್‌ರ 11ನೇ ಪುಣ್ಯತಿಥಿ ಅಭಿಮಾನಿಗಳಿಂದ ಸಮಾಧಿಗೆ ಪೂಜೆ

Pinterest LinkedIn Tumblr

kannada

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅಭಿಮಾನಿಗಳನ್ನಗಲಿ ಇಂದಿಗೆ 11 ವರ್ಷ ಕಳೆದಿವೆ. ರಾಜ್‌ಕುಮಾರ್ ಭೌತಿಕವಾಗಿ ಇಲ್ಲದಿದ್ದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. 11ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ನಾಡಿನ ನಾನಾ ಕಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

ರಾಜ್‌ಕುಮಾರ್ ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.

ರಾಜ್‌ಕುಮಾರ್ ಅವರು ಇಷ್ಟಪಡುವ ತಿಂಡಿ ತಿನಿಸುಗಳನ್ನು ಸಮಾಧಿ ಬಳಿ ಇಟ್ಟು ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ಕಂಠೀರವ ಸ್ಟುಡಿಯೋ ಆವರಣದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಜನರು ಪ್ರೀತಿ, ಅಭಿಮಾನದಿಂದ ಪೂಜೆ ಸಲ್ಲಿಸಿ, ಅಭಿಮಾನ ತೋರಿದರು. ಪುಣ್ಯತಿಥಿಯ ಹಿನ್ನೆಲೆಯಲ್ಲಿ ರಕ್ತದಾನ, ಆರೋಗ್ಯ ಶಿಬಿರ ನಡೆಯಿತು.

ಸಮಾಧಿ ಬಳಿ ಪೂಜೆ ಸಲ್ಲಿಸಿದ ಅಭಿಮಾನಿಗಳು ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುತ್ತಿರುವುದು ರಾಜ್‌ಕುಮಾರ್ ಅವರ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾಗಿತ್ತು. ಈ ವೇಳೆ ಚಿತ್ರರಂಗದ ಅನೇಕರೂ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.

Write A Comment