ರಾಷ್ಟ್ರೀಯ

ಪಟೇಲ್‌ ಸಮುದಾಯದ ಪ್ರತಿಭಟನೆ: ಮೀಸಲಾತಿ ಪ್ರತಿಭಟನೆ, ಹಿಂಸಾಚಾರ, ಲಾಠಿಚಾರ್ಜ್‌

Pinterest LinkedIn Tumblr

Patelwebಮೆಹಸಾನ (ಪಿಟಿಐ): ಇತರೆ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಭಾನುವಾರ ಗುಜರಾತ್‌ನ ಮೆಹಸಾನ ಪಟ್ಟಣದಲ್ಲಿ ಪಟೇಲ್‌ ಸಮುದಾಯ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.
ಜೈಲಿನಲ್ಲಿರುವ ತಮ್ಮ ಸಮುದಾಯದ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಮೊಧೆರಾ ಚೌಕದಲ್ಲಿ ಸೇರಿ ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು. ಅಶ್ರುವಾಯು ಸೆಲ್‌ ಸಿಡಿಸಿ ಗುಂಪನ್ನು ಚದುರಿಸಿದರು. ಲಾಠಿಪ್ರಹಾರದಲ್ಲಿ ಸರ್ದಾರ್ ಪಟೇಲ್‌ ಗ್ರೂಪ್‌ನ (ಎಸ್‌ಪಿಜಿ) ಲಾಲ್‌ಜಿ ಪಟೇಲ್‌ ಅವರ ತಲೆಗೆ ಗಂಭೀರ ಗಾಯವಾಗಿದೆ.
‘ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಪೊಲೀಸರು ಇದ್ದಕ್ಕಿದ್ದಂತೆ ಲಾಠಿ ಪ್ರಹಾರ ಆರಂಭಿಸಿದರು’ ಎಂದು ಲಾಲ್‌ಜಿ ಪಟೇಲ್‌ ಹೇಳಿದ್ದಾರೆ.
‘ಪ್ರತಿಭಟನಾ ನಿರತ ಗುಂಪೊಂದು ಕಲ್ಲು ತೂರಾಟ ನಡೆಸುವ ಮೂಲಕ ಹಿಂಸಾಚಾರಕ್ಕೆ ಇಳಿಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು’ ಎಂದು ಗುಜರಾತ್‌ನ ಪ್ರಭಾರ ಡಿಜಿಪಿ ಪಿಪಿ ಪಾಂಡೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Write A Comment