ವಾಷಿಂಗ್ಟನ್,ಏ.17-ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನ ಎರಡು ಕಂಪೆನಿಗಳಿಗೆ ಇಲ್ಲಿನ ಫೆಡರಲ್ ಕೋರ್ಟ್ 940 ಮಿಲಿಯನ್(ದಶಲಕ್ಷ) ಡಾಲರ್ಗಳ ದಂಡ ವಿಧಿಸಿದೆ. ಈ ಎರಡೂ ಕಂಪೆನಿಗಳು ಅಮೆರಿಕದ ಹೆಲ್ತ್ಕೇರ್ ಸಾಫ್ಟ್ವೇರ್ ಸಿಸ್ಟಂನ್ನು ಕಳವು ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ನ್ಯಾಯಾಲಯದ ಈ ತೀರ್ಪಿನಿಂದ ವಿದೇಶದಲ್ಲಿರುವ ಭಾರತೀಯ ಕಂಪೆನಿಗಳಿಗೆ ಭಾರೀ ಅವಮಾನವಾದಂತಾಗಿದೆ.
ಅಮೆರಿಕ ಕಾನೂನು ಪ್ರಕಾರ ಮೇಲ್ಮನವಿಗೆ 30 ದಿನಗಳ ಕಾಲಾವಕಾಶವಿದ್ದು, ಅದರೊಳಗಾಗಿ ತಾನು ಮೇಲ್ಮನವಿ ಸಲ್ಲಿಸುವುದಾಗಿ ಕಂಪೆನಿ ಹೇಳಿದೆ. ಅಲ್ಲದೆ ತಾನು ಯಾವುದೇ ಸಾಫ್ಟ್ವೇರ್ ದುರುಪಯೋಗ ಮಾಡಿಕೊಂಡಿಲ್ಲ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪೆನಿ ಹೇಳಿದೆ.