ಮನೋರಂಜನೆ

ಆರ್ ಸಿಬಿ ವಿರುದ್ಧ ದೆಹಲಿಗೆ 7 ವಿಕೆಟ್ ಗಳ ಜಯ

Pinterest LinkedIn Tumblr

quinton-de-kock

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್- ದೆಹಲಿ ಡೇರ್ ಡೆವಿಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ದೆಹಲಿ ತಂಡ 7 ವಿಕೆಟ್ ಗಳ ಜಯಗಳಿಸಿದೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ನೀಡಿದ್ದ 191 ರನ್ ಗಳ ಗುರಿಯನ್ನು ಬೆನ್ನಟ್ಟಿದ ದೆಹಲಿ ಡೇರ್ ಡೆವಿಲ್ಸ್ ತಂಡ ಆರಂಭಿಕ ಓವರ್ ನಲ್ಲೇ ವಿಕೆಟ್ ಕಳೆದುಕೊಂಡಿತಾದರೂ ನಂತರದ ಓವರ್ ಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ದೊಡ್ಡ ಹೊಡೆತಕ್ಕೆ ಯತ್ನಿಸಿ ಸ್ಯಾಮ್ಸನ್ ಆರ್ ಸಿಬಿ ತಂಡದ ಚಾಹಲ್‌ ಗೆ ಕ್ಯಾಚಿತ್ತು ಔಟ್ ಆದರು.

18ನೇ ಓವರ್ ವರೆಗೂ ಜೊತೆಯಾಟ ಆಡಿದ ಕ್ವಿಂಟನ್‌ ಡಿ ಕಾಕ್‌- ಕರುಣ್ ನಾಯರ್ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ನಂತರ ಕ್ರೀಸ್ ಗೆ ಬಂದ ಜೆ.ಪಿ ಡುಮಿನಿ ಕರುಣ್ ನಾಯರ್ ಅವರೊಂದಿಗೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರ್ ಸಿಬಿ ಪರ ಬೌಲರ್ ಶ್ರೀನಾಥ್ ಅರವಿಂದ್ 32 ರನ್ ನೀಡಿ ಒಂದು ವಿಕೆಟ್ ಪಡೆದರೆ ಪರ್ವೇಜ್ ರಸೂಲ್ 28 ರನ್ ನೀಡಿದರು. ದೆಹಲಿ ಡೇರ್ ಡೆವಿಲ್ಸ್ ಪರ ಕ್ವಿಂಟನ್‌ ಡಿ ಕಾಕ್‌ 51 ಎಸೆತಗಳಲ್ಲಿ 108 ರನ್ ಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಭರ್ಜರಿ ತಿರುಗೇಟು: ಸವಾಲಿನ ಗುರಿ ಬೆನ್ನು ಹತ್ತಿದ ಡೆಲ್ಲಿ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಆಘಾತ ಕಾಡಿತು. ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್‌ ಬೇಗನೆ ಔಟಾದರು. ಆಗ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದ ಕಾಕ್ ಮತ್ತು ಕರುಣ್‌ ಆಟ ಅದ್ಭುತ. ಇದು ಪಂದ್ಯದ ತಿರುವಿಗೂ ಕಾರಣವಾಯಿತು.

ಕಾಕ್‌ ಕೇವಲ 51 ಎಸೆತಗಳಲ್ಲಿ 108 ರನ್‌ ಬಾರಿಸಿದರು. 15 ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸಿದರು. ಕರುಣ್‌ ಔಟಾಗದೆ 54 ರನ್ ಕಲೆ ಹಾಕಿದರು. 42 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಒಂದು ಸಿಕ್ಸರ್‌ ಬಾರಿಸಿದರು. ತವರಿನ ಕ್ರೀಡಾಂಗಣದಲ್ಲಿ ಆಡು ತ್ತಿದ್ದ ಕರುಣ್‌ ಪ್ರತಿ ರನ್ ಗಳಿಸಿದಾಗಲೂ ಭಾರಿ ಉತ್ಸಾಹದಿಂದ ಮತ್ತೊಂದು ರನ್‌ ಗಾಗಿ ಓಡುತ್ತಿದ್ದರು. ಅನುಭವಿ ಕಾಕ್‌ ಅವರಿಗಂತೂ ಕರುಣ್ ಅತ್ಯುತ್ತಮ ಜೊತೆಗಾರ ಎನಿಸಿದರು.

22 ಎಸೆತಗಳಲ್ಲಿ ಅರ್ಧಶತಕ ಪೂರೈ ಸಿದ ಬಳಿಕ ಕಾಕ್‌ ಅವರನ್ನು ಕಟ್ಟಿ ಹಾಕಲು ಆರ್‌ಸಿಬಿಯ ಯಾವ ಬೌಲರ್‌ ಗಳಿಗೂ ಸಾಧ್ಯವಾಗಲಿಲ್ಲ.
ಡೆಲ್ಲಿ ತಂಡ ಆರಂಭದಿಂದಲೂ ಉತ್ತಮ ರನ್ ರೇಟ್‌ ಉಳಿಸಿಕೊಂಡು ಬಂದಿತ್ತು. ಮೊದಲ ಹತ್ತು ಓವರ್‌ಗಳು ಮುಗಿದಾಗ 93 ರನ್ ಗಳಿಸಿತ್ತು. ಪಂದ್ಯಕ್ಕೆ ತಿರುವು ಸಿಕ್ಕಿದ್ದು 14ನೇ ಓವರ್‌ನಲ್ಲಿ. ಈ ಓವರ್‌ನಲ್ಲಿ ಒಟ್ಟು 20 ರನ್‌ಗಳು ಬಂದವು. ಕರುಣ್ ಒಂದು ಬೌಂಡರಿ ಬಾರಿಸಿದರೆ, ಕಾಕ್‌ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದರು.

15 ಓವರ್‌ಗಳು ಮುಗಿಯುವಷ್ಟ ರಲ್ಲಿ ವೇಗವಾಗಿ ರನ್ ಗಳಿಸಿದ್ದ ಡೆಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಕೊನೆಯ 30 ಎಸೆತಗಳಲ್ಲಿ 46 ರನ್ ಗಳಿ ಸುವ ಸವಾಲು ಇತ್ತು. 16ನೇ ಓವರ್‌ನಲ್ಲಿ 12 ಮತ್ತು ನಂತರದ ಓವರ್‌ನಲ್ಲಿ 13 ರನ್ ಗಳಿಸಿದ ಡೆಲ್ಲಿ ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು. ದುರ್ಬಲ ಬೌಲಿಂಗ್‌ಗೆ ಬೆಲೆ ಕಟ್ಟಿದ ಆರ್‌ಸಿಬಿ ತವರಿ ನಲ್ಲಿಯೇ ನಿರಾಸೆ ಕಂಡಿತು.

ಸ್ಕೋರ್‌ಕಾರ್ಡ್‌
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 5 ಕ್ಕೆ 191
(20 ಓವರ್‌ಗಳಲ್ಲಿ)

ಕ್ರಿಸ್‌ ಗೇಲ್‌ ಸಿ. ಜೆ.ಪಿ. ಡುಮಿನಿ ಬಿ. ಜಹೀರ್‌ ಖಾನ್‌ 00
ವಿರಾಟ್‌ ಕೊಹ್ಲಿ ಸಿ. ಶ್ರೇಯಸ್ ಅಯ್ಯರ್ ಬಿ. ಮಹಮ್ಮದ್ ಶಮಿ 79
ಎ.ಬಿ ಡಿವಿಲಿಯರ್ಸ್‌್ ಸಿ. ಮಹಮ್ಮದ್ ಶಮಿ ಬಿ. ಚಾರ್ಲೊಸ್‌ ಬ್ರಾಥ್‌ವೈಟ್ 55
ಶೇನ್‌ ವ್ಯಾಟ್ಸನ್‌್ ಸಿ. ಕ್ರಿಸ್‌ ಮಾರಿಸ್‌ ಬಿ. ಮಹಮ್ಮದ್ ಶಮಿ 33
ಸರ್ಫರಾಜ್‌ ಖಾನ್‌ ರನ್ ಔಟ್‌ (ಮಹಮ್ಮದ್ ಶಮಿ) 01
ಕೇದಾರ್‌ ಜಾಧವ್‌ ಔಟಾಗದೆ 09
ಡೇವಿಡ್‌ ವೈಸಿ ಔಟಾಗದೆ 05
ಇತರೆ: (ಲೆಗ್‌ ಬೈ–8, ವೈಡ್‌–1) 09
ವಿಕೆಟ್‌ ಪತನ: 1–0 (ಗೇಲ್‌; 0.3), 2–107 (ಡಿವಿಲಿಯರ್ಸ್‌; 11.2),
3–170 (ವ್ಯಾಟ್ಸನ್‌; 16.2), 4–172 (ಸರ್ಫರಾಜ್‌; 16.5), 5–177 (ಕೊಹ್ಲಿ; 18.1).
ಬೌಲಿಂಗ್‌: ಜಹೀರ್ ಖಾನ್‌ 4–0–50–1, ಕ್ರಿಸ್‌ ಮಾರಿಸ್‌ 4–0–29–0, ಮಹಮ್ಮದ್‌ ಶಮಿ 4–0–34–2, ಪವನ್‌ ನೇಗಿ 3–0–26–0, ಅಮಿತ್ ಮಿಶ್ರಾ 3–0–26–0, ಚಾರ್ಲೊಸ್‌ ಬ್ರಾಥ್‌ವೈಟ್‌ 2–0–18–1.

ಡೆಲ್ಲಿ ಡೇರ್‌ಡೆವಿಲ್ಸ್‌ 3 ಕ್ಕೆ 192 (19.1 ಓವರ್‌ಗಳಲ್ಲಿ)

ಕ್ವಿಂಟನ್ ಡಿ ಕಾಕ್‌ ಸಿ. ಕೇದಾರ್ ಜಾಧವ್‌ ಬಿ. ಶೇನ್ ವ್ಯಾಟ್ಸನ್‌ 108
ಶ್ರೇಯಸ್ ಅಯ್ಯರ್‌ ಸಿ. ಡೇವಿಡ್‌ ವೈಸಿ ಬಿ. ಎಸ್‌. ಅರವಿಂದ್‌ 00
ಸಂಜು ಸ್ಯಾಮ್ಸನ್‌ ಸಿ. ಯಜುವೇಂದ್ರ ಚಾಹಲ್‌ ಬಿ. ಶೇನ್ ವ್ಯಾಟ್ಸನ್‌ 09
ಕರುಣ್ ನಾಯರ್‌ ಔಟಾಗದೆ 54
ಜೆ.ಪಿ ಡುಮಿನಿ ಔಟಾಗದೆ 07
ಇತರೆ: (ಲೆಗ್‌ ಬೈ–3, ವೈಡ್‌್–10, ವೈಡ್‌–1) 14
ವಿಕೆಟ್‌ ಪತನ: 1–11 (ಅಯ್ಯರ್‌; 0.6) 2–50 (ಸಂಜು; 5.4), 3–184 (ಕಾಕ್‌; 18.2).
ಬೌಲಿಂಗ್‌: ಎಸ್‌. ಅರವಿಂದ್‌ 3–0–32–1, ಪರ್ವೇಜ್‌ ರಸೂಲ್‌ 3–0–28–0, ಶೇನ್‌ ವ್ಯಾಟ್ಸನ್‌ 4–0–25–2, ಯಜುವೇಂದ್ರ ಚಾಹಲ್‌ 2.1–0–23–0, ಡೇವಿಡ್‌ ವೈಸಿ 4–0–49–0, ಹರ್ಷಲ್‌ ಪಟೇಲ್‌ 3–0–32–0.

ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 7 ವಿಕೆಟ್‌ ಗೆಲುವು.
ಪಂದ್ಯಶ್ರೇಷ್ಠ: ಕ್ವಿಂಟನ್ ಡಿ ಕಾಕ್‌.

Write A Comment