ಮನೋರಂಜನೆ

ಮದುವೆ ವದಂತಿ ತಳ್ಳಿಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ

Pinterest LinkedIn Tumblr

tamanna

ನವದೆಹಲಿ: ಬಾಹುಬಲಿ ನಟಿ ತಮನ್ನಾ ಭಾಟಿಯಾ ಅವರು ಮದುವೆಯಾಗುತ್ತಿದ್ದಾರೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ವರದಿಗಳನ್ನು ಮಿಲ್ಕಿ ಬ್ಯೂಟಿ ತಳ್ಳಿಹಾಕಿದ್ದಾರೆ.

ಇದೊಂದು ಸುಳ್ಳು ಸುದ್ದಿ. ನಾನು ಮದುವೆಯಾಗುತ್ತಿಲ್ಲ. ನಾನು ದಾಂಪತ್ಯ ಜೀವನಕ್ಕೆ ಕಾಲಿಡುವ ದಿನ ಬಂದಾಗ ಅದನ್ನು ಮೊದಲು ಪ್ರಪಂಚಕ್ಕೆ ತಿಳಿಸುತ್ತೇನೆ ಎಂದು ತಮನ್ನಾ ಸ್ಪಷ್ಟಪಡಿಸಿದ್ದಾರೆ.

ನಾನು ಈಗ ಸದ್ಯ ಪ್ರಭುದೇವ್ ಅವರ ಮುಂದಿನ ಚಿತ್ರ ಹಾಗೂ ಇತರೆ ಕೆಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಮನ್ನಾ ಹೇಳಿಕೆ ನೀಡಿದ್ದಾರೆ.

ಬಹುಭಾಷಾ ನಟಿ ತಮನ್ನಾ ಅವರು ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದು, ಕಳೆದ ಕೆಲವು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿ ಮಾಡಲಾಗಿತ್ತು. ಅಲ್ಲದೆ ತಮನ್ನಾ ‘ಬಾಹುಬಲಿ-2’ ಚಿತ್ರದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಗಾಸಿಪ್ ಟಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು.

ಪಂಜಾಬಿ ಬೆಡಗಿ ತಮನ್ನಾ ತಮ್ಮ ನಟನೆ ಜೊತೆ ಜೊತೆಗೆ ಬ್ಯೂಟಿಯಿಂದಲೂ ಹೆಸರು ಮಾಡಿದವರು. ತಮಿಳು, ತೆಲುಗು,ಹಿಂದಿ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತನ್ನ ಬಬ್ಲಿ ಬಬ್ಲಿ ನಟನೆಯಿಂದ ಪಡ್ಡೆಗಳ ಕನಸಿನ ರಾಣಿಯಾಗಿರುವ ಈ ಬ್ಯೂಟಿಗೆ ಬ್ರೇಕ್ ನೀಡಿದ್ದು ತೆಲುಗಿನ ಫ್ಲರ್ಟರ್ ಬಾಯ್ ಸಿದ್ದಾರ್ಥ ಜೊತೆಗಿನ ‘ಕೊಚ್ಚಂ ಇಷ್ಟಂ ಕೊಚ್ಚಂ ಕಷ್ಟಂ’ ಸಿನಿಮಾ.

Write A Comment