ಕನ್ನಡ ವಾರ್ತೆಗಳು

ಯುವ ಪತ್ರಕರ್ತ ಚಂದ್ರಹಾಸ ಚಾರ್ಮಾಡಿಯವರಿಗೆ ಪ.ಗೋ. ಪ್ರಶಸ್ತಿ ಪ್ರದಾನ

Pinterest LinkedIn Tumblr

press_club_photo_1

ಮಂಗಳೂರು, ಎ. 26: ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮೀಣ ವರದಿಗಾರಿಕೆಗೆ ನೀಡುವ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಜರಗಿತು.

2015ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಆಯ್ಕೆಯಾದ ‘ನಿರಂತರ ಪ್ರಗತಿ’ ಪತ್ರಿಕೆಯ ಉಪಸಂಪಾದಕರಾದ ಯುವ ಪತ್ರಕರ್ತ ಚಂದ್ರಹಾಸ ಚಾರ್ಮಾಡಿಯವರಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್. ಡಿ. ಪ್ರಶಸ್ತಿ ಪ್ರಧಾನ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

2015ರ ಸೆಪ್ಟೆಂಬರ್ 15 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇಹ ನಾಡಲ್ಲಿ, ಮನಸ್ಸು ಕಾಡಲ್ಲಿ…” ವರದಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ.10,001/ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

press_club_photo_2 press_club_photo_3 press_club_photo_4 press_club_photo_5 press_club_photo_6 press_club_photo_7

ಚಂದ್ರಹಾಸ ಚಾರ್ಮಾಡಿಯವರು ಪ್ರಸ್ತುತ ಕಳೆದ 7 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಿತ ರಾಜ್ಯದಾದ್ಯಂತ ೪ ಲಕ್ಷ ಪ್ರಸಾರವನ್ನು ಹೊಂದಿರುವ ನಿರಂತರ ಪ್ರಗತಿ ಮಾಸಪತ್ರಿಕೆಯ‌ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ, ಸುಧಾ, ಡೆಕ್ಕನ್ ಹೆರಾಲ್ಡ್, ತರಂಗ, ಕರ್ಮವೀರ, ಕೃಷಿಪೇಟೆ, ಸುದ್ದಿಬಿಡುಗಡೆ ‌ಉದಯವಾಣಿ, ವಿಜಯವಾಣಿ, ವಿಜಯಕರ್ನಾಟಕ, ಹೊಸದಿಗಂತ ದಿನಪತ್ರಿಕೆಗಳಲ್ಲಿ ಈವರೆಗೆ ಸುಮಾರು 4,500 ಲೇಖನ, ನುಡಿಚಿತ್ರಗಳು ಪ್ರಕಟಗೊಂಡಿದ್ದು ಈಗಲೂ ಪ್ರಕಟಗೊಳ್ಳುತ್ತಿವೆ.

ಕಾಲೇಜು ದಿನಗಳಲ್ಲಿ ಹನಿಗವನ ಮತ್ತು ಕವನ ಸ್ಪರ್ಧೆಯಲ್ಲಿರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುತ್ತದೆ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ‌ಆಯ್ಕೆಗೊಂಡಿರುತ್ತಾರೆ.ಕಳೆದ 5 ವರ್ಷಗಳಿಂದ ಛಾಯಾಚಿತ್ರ ಗ್ರಾಹಕರಾಗಿಯೂ ಗುರುತಿಸಿಗೊಂಡು ಮದುವೆ ಮುಂತಾದ ಶುಭ ಸಂದರ್ಭಗಳ ಛಾಯಾಚಿತ್ರಗ್ರಹಣ ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಗಳೂರು, ಇವರಿಂದ ಪ್ರಕಟಿತ ಕೃಷಿಪೇಟೆ ಮಾಸಪತ್ರಿಕೆಯಲ್ಲಿ ಪ್ರಕಟಿತ‌ ಇವರ ಬರಹಕ್ಕೆ 2015ನೇ ಸಾಲಿನ ಉತ್ತಮ ಲೇಖನ ಪ್ರಶಸ್ತಿ ಲಭಿಸಿರುತ್ತದೆ. ಲೇಖನಗಳಿಗಾಗಿ ರಾಜ್ಯದಾದ್ಯಂತ ಪ್ರವಾಸಗೈಯ್ಯುತ್ತಾರೆ.

ಬೀಳ್ಕೊಡುಗೆ :

ಕಾರ್ಯಕ್ರಮದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಪ್ರಜಾವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅವರನ್ನು ಬೀಳ್ಕೊಡಲಾಯಿತು.

ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ್ ಇಂದಾಜೆ ವಂದಿಸಿದರು.

Write A Comment