ಲಂಡನ್: ಬೈಕ್‍ನಲ್ಲಿ ರಸ್ತೆಯಲ್ಲಿ ಹೋಗಬಹುದು. ಆದರೆ ಇನ್ನು ಮುಂದೆ ಬೈಕ್ ಏರಿ ಗಾಳಿಯಲ್ಲಿ ಹಾರಿಕೊಂಡು ಹೋಗಬಹುದು.
ಹೌದು ಇಂಗ್ಲೆಂಡಿನ ಪ್ಲಂಬರ್ ಒಬ್ಬರು ಗಾಳಿಯಲ್ಲಿ ಹಾರಿಕೊಂಡು ಹೋಗುವ ಹೋವರ್ ಬೈಕ್‍ನ್ನು ಮನೆಯಲ್ಲೇ ಕುಳಿತು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿಯವರೆಗೆ ಹಲವಾರು ಮಂದಿ ಹೋವರ್ ಬೈಕ್ ಅಭಿವೃದ್ಧಿ ಪಡಿಸಲು ಮುಂದಾಗಿದ್ದರೂ ಯಶ ಕಾಣಲಿಲ್ಲ. ಆದರೆ ಕೊಲಿನ್ ಎಂಬವರು ಯಶಸ್ವಿಯಾಗಿ ಹೋವರ್ ಬೈಕ್‍ನ್ನು ಸಂಶೋಧಿಸಿದ್ದಾರೆ. ಈ ಹೋವರ್ ಬೈಕ್ ಏರಿ ಕೊಲಿನ್ ಹತ್ತಿರ ಮೈದಾನದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದಾರೆ.