ಮಂಗಳೂರು,ಎ. 30: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ ವಾರ್ಷಿಕ ರಾಜ್ಯ ಮಟ್ಟದ ವಂದನಾ ಪ್ರಶಸ್ತಿಯನ್ನು ಮುಂಬಯಿ ನಗರ ಮೂಲದ ಖ್ಯಾತ ವಾಣಿಜ್ಯೋದ್ಯಮಿ ಹಾಗೂ ಆಲ್ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಡಾ| ಶಶಿಕಿರಣ್ ಶೆಟ್ಟಿಯವರಿಗೆ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.
ಈ ಪ್ರಶಸ್ತಿಯನ್ನು ಡಾ| ಶೆಟ್ಟಿಯವರು ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾದಿಸಿದ ಗಮನಾರ್ಹ ಸಾಧನೆ ಮತ್ತು ಸಮಾಜದ ಕ್ಷೇಮಾಭಿವೃದ್ದಿಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ನೀಡಲಾಗಿದೆ.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ| ದೇವದಾಸ್ ರೈಯವರು ಡಾ| ಶೆಟ್ಟಿಯವರು ಅರ್ಥಿಕ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸಾಧಿಸಿದ ಗಣೀನಿಯ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಡಾ| ನಂದಕೀಶೋರ್ ರಾವ್ ಅಭಿನಂದನಾ ಭಾಷಣ ಮಾಡಿದರು.
ಸನ್ಮಾನಕ್ಕೆ ಸ್ಪಂದಿಸಿ, ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಡಾ| ಶೆಟ್ಟಿಯವರು ಹಲವಾರು ಸಂಸ್ಥೆಗಳು ವ್ಯಕ್ತಿಗಳು, ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಸಾಧಿಸಿದರೂ ಕೆಲವು ಸಾಧಕರನ್ನು ಮಾತ್ರ ಗುರುತಿಸಿ ಸನ್ಮಾನಿಸಲಾಗುವುದು ಎಂದು ವಿಷಾದ ವ್ಯಕ್ತಪಡಿಸಿದರು, ಪ್ರಮಾಣಿಕತೆ, ಸಮಯಪಾಲನೆ, ಗುಣಮಟ್ಟದ ಸೇವೆ, ಗ್ರಾಹಕರ ವಿಶ್ವಾಸವನ್ನು ಸಂಪಾದಿಸಿದರೆ ವಾಣಿಜೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಯನ್ನು ಶ್ಲಾಘಿಸಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಸ್ಯಾಂಕ್ಟಿಸ್ ಸ್ವಾಗತಿಸಿದರು. ರೋಟರಿ ಸಹಾಯಕ ಗವರ್ನರ್‌ರಾದ ರಾಮಕೃಷ್ಣ ಕಾಮತ್‌ರವರು ರೋಟರಿ ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ ಸೆಂಟೋರ್ ಯನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ರೋಟರ್‍ಯಾಕ್ಟ್ ಜಿಲ್ಲಾ ಪ್ರತಿನಿಧಿ ಮಹಾದೇವ ಸ್ವಾಮಿ ಮತ್ತು ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಸಂತೋಷ್ ಶೆಟ್, ಯತೀಶ್ ಸಾಲ್ಯಾನ್, ರಾಜ್‌ಗೋಪಾಲ್ ರೈ, ಅನಿಲ್ ಗೋನ್ಸ್‌ಲಿಸ್ ಉಪಸ್ಥಿತರಿದರು. ರಾಜೇಶ್ ದೇವಾಡಿಗ ವಂದಿಸಿದರು.