ಬೆಳ್ತಂಗಡಿ, ಮೇ 3: ತಾಲೂಕಿನ ಮದ್ದಡ್ಕದಲ್ಲಿ ನಿನ್ನೆ ತಡಸಂಜೆ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾರುಣ ಸಾವನ್ನಪ್ಪಿದ್ದಾರೆ.
ಕುವೆಟ್ಟು ಗ್ರಾಮದ ಪಯ್ಯೊಟ್ಟು ನಿವಾಸಿ, ಅಣ್ಣಿ ಪೂಜಾರಿಯವರ ಪುತ್ರ ಗಣೇಶ್ ಬಂಗೇರ (32) ಮೃತ ವ್ಯಕ್ತಿ. ಅವಿವಾಹಿತರಾಗಿದ್ದ ಅವರು ಪೇಂಟಿಂಗ್ ವೃತ್ತಿ ನಡೆಸುತ್ತಿದ್ದರು.
ನಿನ್ನೆ ಸಂಜೆ ಗಣೇಶ್ ಕೆಲಸ ಮುಗಿಸಿಕೊಂಡು ತನ್ನ ಬೈಕ್ ನಲ್ಲಿ ಗುರುವಾಯನಕೆರೆ ಕಡೆಯಿಂದ ಮುದ್ದಡ್ಕಕ್ಕೆ ವಾಪಸಾಗುತ್ತಿದ್ದರು. ಮುದ್ದಡ್ಕದ ಹಾಲಿನ ಡೈರಿ ಎದುರು ತಲುಪುತ್ತಿದ್ದಂತೆ ಮಡಂತ್ಯಾರು ಕಡೆಯಿಂದ ಗುರುವಾಯನಕೆರೆಯತ್ತ ಚಲಿಸುತ್ತಿದ್ದ ಲಾರಿ ಬೈಕಿಗೆ ಅಪ್ಪಳಿಸಿದೆ ಪರಿಣಾಮ ಬೈಕ್ ಸಹಿತ ರಸ್ತೆಗೆಸೆಯಲ್ಪಟ್ಟು ಗಣೇಶ್ ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.