ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದ ವೇಳೆ ಚೇರ್ ಒದ್ದು ದುರ್ವತನೆ ತೋರಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಗೆ ಪಂದ್ಯದ ಶುಲ್ಕದ ಶೇ. 15ರಷ್ಟು ದಂಡ ವಿಧಿಸಲಾಗಿದೆ.
ಇನ್ನು ಇದೇ ಪಂದ್ಯದಲ್ಲಿ ನಿಧಾನಗತಿ ಓವರ್ ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ 24 ಲಕ್ಷ ರುಪಾಯಿ ದಂಡ ಹಾಕಲಾಗಿದೆ.
ಐಪಿಎಲ್ 2016ರ ಪಂದ್ಯಾವಳಿಯಲ್ಲಿ ಪಂದ್ಯವೊಂದರಲ್ಲಿ ನಿಧಾನಗತಿ ಓವರ್ ಗಾಗಿ ಕೊಹ್ಲಿ 12 ಲಕ್ಷ ತೆತ್ತಿದ್ದು, ಇದೀಗ ಟೂರ್ನಿಯಲ್ಲಿ ಒಟ್ಟಾರೆ 36 ಲಕ್ಷ ರುಪಾಯಿ ತಂಡ ಕಟ್ಟಿದಂತಾಗಿದೆ.