ಕನ್ನಡ ವಾರ್ತೆಗಳು

ಬ್ಯಾಂಕ್ ಮತ್ತು ಪೆಟ್ರೋಲ್ ಬಂಕ್ ನಲ್ಲಿ ಕಳವು ಯತ್ನ : ಆರೋಪಿಯ ಬಂಧನ

Pinterest LinkedIn Tumblr

Bank_robary_1

ಬಂಟ್ವಾಳ, ಮೇ.04: ಸಜಿಪಮೂಡದ ಕರ್ನಾಟಕ ಬ್ಯಾಂಕ್ ಕಳವು ಯತ್ನ ಹಾಗೂ ಮೆಲ್ಕಾರ್ ಪೆಟ್ರೋಲ್ ಬಂಕ್ ನಲ್ಲಿ ಕಳವು ಪ್ರಕರಣದ ಪ್ರಮುಖ ಆರೋಪಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಾಸರಗೋಡು ನಿವಾಸಿ ಮಹಮ್ಮದ್ ಶೋಯೆಲ್ (24) ಎಂದು ಗುರುತಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯು ಕರ್ನಾಟಕ ಹಾಗೂ ಕೇರಳರಾಜ್ಯದ ಹಲವು ದರೋಡೆಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ.

ಬದಿಯಡ್ಕದ ಮೊಬೈಲ್ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿ, ಸ್ಥಳೀಯ ಪೊಲೀಸರು ಶೋಯೆಲ್‌ನನ್ನು ವಿಚಾರಣೆಗೆ ಗುರಿಪಡಿಸಿದಾಗ ಬಂಟ್ವಾಳದ ಪ್ರಕರಣಗಳು ಬೆಳಕಿಗೆ ಬಂದಿತ್ತು, ಅದರಂತೆ ಆರೋಪಿಯನ್ನು ಬಂಟ್ವಾಳಕ್ಕೆ ಹಸ್ತಾಂತರಿಸಿದ್ದು, ವಿಚಾರಣೆ ವೇಳೆ ಸಜಿಪಮೂಡದ ಕರ್ನಾಟಕಬ್ಯಾಂಕ್ ನಲ್ಲಿ ಕಳವಿಗೆ ಯತ್ನಿಸಿರುವುದು ಹಾಗೂ ಮೆಲ್ಕಾರ್ ಪೆಟ್ರೋಲ್ ಬಂಕ್ ನ ಕಳ್ಳತನದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಈ ಪ್ರಕರಣದಲ್ಲಿ ಈತನಜೊತೆಗಿದ್ದ ಕೇರಳದ ಅಶ್ರು ಈಗಾಗಲೇ ಕೇರಳದ ಜೈಲಿನಲ್ಲಿದ್ದಾನೆ. ಬಂಧಿತ ಆರೋಪಿ ಶೋಯೆಲ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚುವರಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ , ನಗರಠಾಣಾಧಿಕಾರಿ ನಂದಕುಮಾರ್, ನಗರ ಠಾಣೆಯ ಕ್ರೈಂ ಎಸೈ ಗಂಗಾಧರಪ್ಪ, ಎಎಸ್‌ಐ ಸಂಜೀವ, ಸಿಬ್ಬಂದಿಗಳಾದ ಸುರೇಶ್, ಪ್ರಶಾಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Write A Comment