ಕನ್ನಡ ವಾರ್ತೆಗಳು

ಓವರ್ಟೇಕ್‌ನ ಭರದಲ್ಲಿ ಬಾಲಕನಿಗೆ ಗುಂಡಿಕ್ಕಿ ಸಾಯಿಸಿದ ಜೆಡಿಯು ನಾಯಕಿಯ ಪುತ್ರ

Pinterest LinkedIn Tumblr

gun-14

ಬಿಹಾರ: ಜೆಡಿಯು ನಾಯಕರ ಪುತ್ರನೊಬ್ಬ ತನ್ನ ಎಸ್ಯುವಿ ಕಾರನ್ನು ಓವರ್ಟೇಕ್ ಮಾಡಿದ 19 ವರ್ಷ ವಯಸ್ಸಿನ ಬಾಲಕನಿಗೆ ಗುಂಡಿಕ್ಕಿ ಸಾಯಿಸಿದ ಅಮಾನುಷ ಘಟನೆ ಬಿಹಾರದ ಗಯಾದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಪ್ರಮುಖ ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚ್ದೇವ ತನ್ನ ಸ್ನೇಹಿತರ ಜತೆ ಸ್ವಿಫ್ಟ್ ಕಾರಿನಲ್ಲಿದ್ದು, ಬಿಹಾರದ ಎಂಎಲ್ಸಿ ಮನೋರಮಾ ದೇವಿಯ ಪುತ್ರಿ ಕುಳಿತಿದ್ದ ರೇಂಜ್ ರೋವರ್ ಕಾರನ್ನು ಓವರ್ ಟೇಕ್ ಮಾಡಿದ್ದ. ಎಸ್ಯುವಿನಲ್ಲಿ ಮನೋರಮಾ ದೇವಿಯ ಪುತ್ರ ರಾಕಿ ಬಿಹಾರ ಪೊಲೀಸ್ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಸುತ್ತಿದ್ದ.

ಎಸ್ಯುವಿಯನ್ನು ಸ್ವಿಫ್ಟ್ ಕಾರು ಓವರ್ಟೇಕ್ ಮಾಡಿದ ಕೂಡ ರಾಕಿ ಮತ್ತು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡುಹಾರಿಸಿದರು. ನಾವು ಕಾರನ್ನು ನಿಲ್ಲಿಸಿದಾಗ ಅವರು ಕಾರಿನಿಂದ ಇಳಿಯುವಂತೆ ನಮಗೆ ಸೂಚಿಸಿ ಮುಷ್ಠಿಪ್ರಹಾರ ಮಾಡಿದರು. ನಾವು ಸ್ಥಳದಿಂದ ನಿರ್ಗಮಿಸುವಾಗ ಯಾರೋ ಗುಂಡು ಹಾರಿಸಿದಾಗ ನನ್ನ ಸ್ನೇಹಿತನಿಗೆ ಗುಂಡು ತಾಕಿತು ಎಂದು ಆದಿತ್ಯಾ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾನೆ.

ಗಾರ್ಡ್ ಅಲ್ಲದೇ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಕೂಡ ಬಂದೂಕು ಇತ್ತು ಎಂದವನು ಹೇಳಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ , ಆದಿತ್ಯನಿಗೆ ತಾಕಿದ ಗುಂಡು ನನ್ನ ಬಂದೂಕಿನಿಂದ ಹಾರಿದ್ದಲ್ಲ. ಇದು ಅವರಿಬ್ಬರು ಜಗಳವಾಡುವಾಗ ರಾಕಿಯ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿರಬಹುದು ಎಂದು ಹೇಳಿದ್ದಾನೆ.

Write A Comment