ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಪತ್ನಿಯೇ ಕೊಲೆಗೈದಿರುವ ದುರ್ಘಟನೆ ನೆಲಮಂಗಲ ಬಳಿಯ ಭೂಮಸಂದ್ರದಲ್ಲಿ ನಡೆದಿದೆ.
ಭೂಮಸಂದ್ರದ ರಂಗಸ್ವಾಮಿ ಕೊಲೆಯಾದವರು ಕೃತ್ಯವೆಸಗಿದ ಪತ್ನಿ ರಮ್ಯಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಕಳೆದ ೬ ವರ್ಷಗಳ ಹಿಂದೆ ರಂಗಸ್ವಾಮಿ ಅವರನ್ನು ವಿವಾಹವಾಗಿದ್ದ ರಮ್ಯ ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದು ಮನೆಯ ಹೊರಗೆಳೆದು ಹೊಡೆಯುತ್ತಿದ್ದರು.
ನಿನ್ನೆ ರಮ್ಯ ಪತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಲೆ ಮಾಡಿದ್ದು ಸಂಬಂಧಿಕರೇ ಆಕೆಯನ್ನು ಹಿಡಿದು ಕೂಡಿಹಾಕಿ ಪೊಲಿಸರಿಗೆ ಹಿಡಿದು ಕೊಟ್ಟಿದ್ದರು.