ಕನ್ನಡ ವಾರ್ತೆಗಳು

ಇಂಡಿಯನ್ ನೇವಿಯ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ಪುತ್ತೂರಿನ ಹಾಫಿಝ್. ಕೆ.ಎ. ಆಯ್ಕೆ

Pinterest LinkedIn Tumblr

Indian_Navi_Hafij

ಮ೦ಗಳೂರು, ಮೇ.12 :ಭಾರತೀಯ ನೌಕಾಪಡೆ (Indian Navy) ಇಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್ ಸಬ್ ಲೆಫ್ಟಿನೆಂಟ್ ಪ್ರಥಮ ಶ್ರೇಣಿಯ ಅಧಿಕಾರಿಯಾಗಿ ಪುತ್ತೂರಿನ ಹಾಫಿಝ್. ಕೆ.ಎ.(23) ಇವರು ಭಾರತೀಯ ನೌಕಾಪಡೆಯಿಂದ ನೇಮಕಗೊಂಡಿರುತ್ತಾರೆ. 

2015ರ ನವೆಂಬರ್ ತಿಂಗಳಲ್ಲಿ ಭಾರತೀಯ ನೌಕಾಪಡೆ ವತಿಯಿಂದ ಕೊಯಂಬತ್ತೂರು ಮತ್ತು ಕೊಚ್ಚಿಯಲ್ಲಿ ಎಸ್.ಎಸ್.ಬಿ. ಸಂದರ್ಶನಕ್ಕಾಗಿ ಆಯ್ಕೆಗೊಂಡಿದ್ದ, ದೇಶದ ವಿವಿಧ ರಾಜ್ಯಗಳ 150 ಇಂಜಿನಿಯರ್‌ಗಳಲ್ಲಿ ತಾಂತ್ರಿಕ, ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಪುತ್ತೂರಿನ ಹಾಫಿಝ್. ಕೆ.ಎ..

ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿರುವ ಇವರು ಪುತ್ತೂರು ಸಾಲ್ಮರ ಮೌಂಟನ್ ವ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸುದಾನ ಶಾಲೆ, ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿ. ಹಾಫಿಝ್. ಕೆ.ಎ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ ಆರೋಗ್ಯ ಮೇಲ್ವಿಚಾರಕರಾಗಿರುವ ಕೆ. ಅಬೂಬಕ್ಕರ್ ಹಾಗೂ ಆಯಿಷಾ ದಂಪತಿಯ ದ್ವಿತೀಯ ಪುತ್ರ.

Write A Comment